ಬೆಂಗಳೂರು : ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೊಸ ಆದ್ಯತಾ ಪಡಿತರ ಚೀಟಿ ಕಾರ್ಡ್ ಹಂಚಿಕೆಗೆ ಕೊನೆಗೂ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಹೊಸದಾಗಿ ಬಿಪಿಎಲ್ ಕಾರ್ಡ್ ಹಂಚಿಕೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ಹೊಸ ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದ ಜನರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.
ಹೊಸದಾಗಿ 1,55,927 ಕಾರ್ಡ್ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ವರ್ಷ ಆಗಸ್ಟ್ ಅಂತ್ಯದ ವರೆಗೆ ಆನ್ ಲೈನ್ ಮೂಲಕ ಸುಮಾರು 2,77,662 ಅರ್ಜಿಗಳು ಬಿಪಿಎಲ್ ಕಾರ್ಡ್ಗೆ ಸಲ್ಲಿಕೆ ಆಗಿದ್ದವು.
ಈಗ ಅವುಗಳ ಪರಿಶೀಲನೆ ಮಾಡಿರೋ ರಾಜ್ಯ ಸರ್ಕಾರ ಅರ್ಹತೆ ಪಡೆದ 1,55,927 ಅರ್ಜಿಗಳಿಗೆ ಕಾರ್ಡ್ ನೀಡಲು ಆದೇಶ ಮಾಡಿದೆ.