Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಂಧ್ರಪ್ರದೇಶ : ಜಿಲ್ಲೆಗಳ ಸಂಖ್ಯೆ 26ಕ್ಕೇರಿಸಿದ ಸರ್ಕಾರ

ಆಂಧ್ರಪ್ರದೇಶ : ಜಿಲ್ಲೆಗಳ ಸಂಖ್ಯೆ 26ಕ್ಕೇರಿಸಿದ ಸರ್ಕಾರ
ಹೈದರಾಬಾದ್ , ಬುಧವಾರ, 26 ಜನವರಿ 2022 (10:43 IST)
ಹೈದರಾಬಾದ್ : ಆಂಧ್ರಪ್ರದೇಶ ಸರ್ಕಾರವು ರಾಜ್ಯದಲ್ಲಿನ ಜಿಲ್ಲೆಗಳ ಸಂಖ್ಯೆಯನ್ನು ಪರಿಷ್ಕರಿಸಿದೆ, ಈಗಿರುವ 13 ರಿಂದ 26 ಕ್ಕೆ ಹೆಚ್ಚಿಸಿದೆ.

ಮಂಗಳವಾರ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದ ರಾಜ್ಯ ಸರ್ಕಾರ 13 ಹೊಸ ಜಿಲ್ಲೆಗಳ ರಚನೆಗೆ ಒಪ್ಪಿಗೆ ನೀಡಿದ್ದು, ಈ ಪ್ರಕ್ರಿಯೆಯು ನಿರೀಕ್ಷಿತವಾಗಿದೆ. ಏಪ್ರಿಲ್‌ನಲ್ಲಿ ತೆಲುಗು ಹೊಸ ವರ್ಷದ ಹೊತ್ತಿಗೆ ಪೂರ್ಣಗೊಳ್ಳಲಿದೆ.

ವಿಶಾಖಪಟ್ಟಣದ ಅರಕು ಲೋಕಸಭಾ ಕ್ಷೇತ್ರ ಸೇರಿದಂತೆ 24 ಲೋಕಸಭಾ ಕ್ಷೇತ್ರಗಳನ್ನು ಜಿಲ್ಲೆಗಳಾಗಿ ಪರಿವರ್ತಿಸಲಾಗುತ್ತಿದ್ದು, ಎರಡು ಜಿಲ್ಲೆಗಳಾಗಿ ವಿಂಗಡಣೆಯಾಗಲಿದೆ. ಹೊಸ ಜಿಲ್ಲೆಗಳಲ್ಲಿ ಮಾನ್ಯಂ ಜಿಲ್ಲೆ, ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ, ಅನಕಾಪಲ್ಲಿ, ಕಾಕಿನಾಡ, ಕೋನ ಸೀಮಾ, ಏಲೂರು, ಎನ್‌ಟಿಆರ್ ಜಿಲ್ಲೆ, ಬಾಪಾಟಿಯಾ, ಪಲ್ನಾಡು, ನಂದ್ಯಾಲ್, ಶ್ರೀ ಸತ್ಯಸಾಯಿ ಜಿಲ್ಲೆ, ಅನ್ನಮಯ್ಯ ಜಿಲ್ಲೆ, ಶ್ರೀ ಬಾಲಾಜಿ ಜಿಲ್ಲೆ ಸೇರಿವೆ.

ಅವಿಭಜಿತ ಆಂಧ್ರಪ್ರದೇಶದಲ್ಲಿ ಕೊನೆಯ ಬಾರಿಗೆ 1979 ರಲ್ಲಿ ವಿಜಯನಗರ ಜಿಲ್ಲೆಯ ಸಂಯೋಜನೆಯೊಂದಿಗೆಹೊಸ ಜಿಲ್ಲೆಯನ್ನು ರಚಿಸಲಾಯಿತು.

ಯೋಜನಾ ಕಾರ್ಯದರ್ಶಿ ಜಿಎಸ್‌ಆರ್‌ಕೆಆರ್ ವಿಜಯ್‌ಕುಮಾರ್ ಅವರು ಮುಖ್ಯ ಕಾರ್ಯದರ್ಶಿ ಸಮೀರ್ ಶರ್ಮಾ ಅವರಿಗೆ ಶಿಫಾರಸುಗಳನ್ನು ಹಸ್ತಾಂತರಿಸಿದ ನಂತರ ಮಂಗಳವಾರ ತಡರಾತ್ರಿ ಸಂಪುಟ ನಿರ್ಧಾರ ಹೊರಬಿದ್ದಿದೆ. ನಂತರ ಎಲ್ಲಾ ಜಿಲ್ಲೆಗಳಲ್ಲಿ ಇದನ್ನು ಪ್ರಕಟಿಸಲು ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನ ಶುಚಿಗೊಳಿಸುವ ನೆಪದಲ್ಲಿ ವಂಚನೆ