ಹೊಸ ವರ್ಷದ ನಂತರದಲ್ಲಿನ ಶಿವರಾತ್ರಿ, ಯುಗಾದಿ ಹಬ್ಬಗಳಿಗೆ ಹೆಚ್ಚಿನ ದರ ಸಿಗಬಹುದೆಂಬ ನಿರೀಕ್ಷೆ ಹೊತ್ತು ಮೂರ್ನಾಲ್ಕು ತಿಂಗಳು ಕಾದು ಕುಳಿತರೂ ಬೆಲೆ ಏರಿಕೆ ಕಾಣದೇ ಒಣದ್ರಾಕ್ಷಿ ದರ ಕುಸಿತ ಕಂಡಿದೆ.
ಇದರಿಂದಾಗಿ ಬೆಳೆಗಾರನಿಗೆ ಒಣದ್ರಾಕ್ಷಿ ಹುಳಿಯಾಗಿದೆ. ಒಣದ್ರಾಕ್ಷಿ ಬೆಲೆ ಏಕಾಏಕಿ ಕುಸಿತ ಕಂಡು ಕೆಜಿಗೆ .50 ರಿಂದ .60 ಗಳವರೆಗೆ ಕಡಿಮೆಯಾಗಿದೆ.
ದ್ರಾಕ್ಷಿ ಬೆಳೆದ ಬೆಳೆಗಾರರಲ್ಲಿ ಮೊಗದಲ್ಲಿ ಆತಂಕ ಮೂಡುವಂತೆ ಮಾಡಿದೆ. ಮಾಚ್ರ್ ಮೊದಲ ವಾರದವರೆಗೂ ಪ್ರತಿ ಕೆಜಿಗೆ .200 ಇದ್ದ ಒಣದ್ರಾಕ್ಷಿ ದಿಢೀರನೆ .130 ರಿಂದ .150 ಗಳವರೆಗೆ ಇಳಿಕೆ ಕಂಡಿದೆ.
ಈ ಹಿಂದಿನ ಕಹಿ ಅನುಭವದಿಂದಾಗಿ ತಾಲೂಕಿನ ಜಗದಾಳ ಗ್ರಾಮವೊಂದರಲ್ಲಿಯೇ ಸುಮಾರು 300 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದು, 500 ಟನ್ಗಳಷ್ಟುಉತ್ಪಾದನೆ ಮಾಡುತ್ತಿದ್ದರು ರೈತರು. ಆದರೀಗ 75 ಟನ್ಗೆ ಇಳಿಕೆ ಕಂಡಿದೆ. ಕಾರಣ, ಬೆಲೆಯಲ್ಲಿ ಆಗುತ್ತಿರುವ ಏರುಪೇರು.
ದ್ರಾಕ್ಷಿ ಬೆಳೆಯುವಾಗ ದೌನಿ ರೋಗ, ಕೊಳೆ ಹಾಗೂ ಬೂದಿ ರೋಗ, ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ ಬೆಳೆ ಬಾರದೆ ಸಮಸ್ಯೆ ಎದುರಾಗಿತ್ತು. ಕೀಟನಾಶಕಗಳ ಸಾಲವನ್ನು ಇನ್ನೂ ತೀರಿಸಿಲ್ಲ. ಇಂತಹ ಸ್ಥಿತಿಯಲ್ಲಿ ಬೆಲೆ ಕುಸಿದಿರುವುದು ದಿಕ್ಕು ತೋಚದಂತಾಗಿದೆ.