ನವದೆಹಲಿ : ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು ದೆಹಲಿ ಮತ್ತು ನೆರೆಯ ಎನ್ಸಿಆರ್ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.
ಭಾರತೀಯ ಕಾಲಮಾನ ರಾತ್ರಿ 7:55ಕ್ಕೆ ಅಫ್ಘಾನಿಸ್ತಾನದ ಫೈಜಾಬಾದ್ನಿಂದ ದಕ್ಷಿಣಕ್ಕೆ 79 ಕಿಮೀ ದೂರದಲ್ಲಿ 200 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿದೆ.
ಈ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ, ದೆಹಲಿ ಹಾಗೂ ನೆರೆಯ ಎನ್ಸಿಆರ್ ಪ್ರದೇಶಗಳಲ್ಲಿ ಕಂಪನ ಉಂಟಾಗಿದೆ. ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಜನರು ಆತಂಕಗೊಂಡು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.