ಮೈಸೂರು : ತಾನೇ ಜನ್ಮ ನೀಡಿದ ಮಗಳಿಗೆ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವೈದ್ಯಕೀಯ ಅಧೀಕ್ಷಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿ ಡಾ.ಇಮ್ತಿಯಾಜ್ ಅಹಮದ್ ಖಾನ್(58) ಎಂಬುದಾಗಿ ತಿಳಿದುಬಂದಿದ್ದು, ಇತ ಉದಯಗಿರಿಯ ಮಂಡ್ಯ ಜಿಲ್ಲೆಯ ಇ.ಎಸ್.ಐ.ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕನಾಗಿದ್ದ. ಇತ ಸ್ವಂತ ಮಗಳಿಗೇ ಕಳೆದ 7 ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಲೈಂಗಿಕ ಕಿರುಕುಳಕ್ಕೆ ಅಡ್ಡಿಯಾದ ಪತ್ನಿ ತಬಸಮ್ ಮೇಲೆಯೂ ವೈದ್ಯ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿ ಡಾ.ಇಮ್ತಿಯಾಜ್ ಅಹಮದ್ ಖಾನ್ನನ್ನ ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.