Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಿಳೆಗೆ ಆಪರೇಷನ್ ಮಾಡುವ ಬದಲು ವೈದ್ಯರು ಮಾಡಿದ್ದೇನು ಗೊತ್ತಾ?

ಮಹಿಳೆಗೆ ಆಪರೇಷನ್ ಮಾಡುವ ಬದಲು ವೈದ್ಯರು ಮಾಡಿದ್ದೇನು ಗೊತ್ತಾ?
ನವದೆಹಲಿ , ಭಾನುವಾರ, 23 ಸೆಪ್ಟಂಬರ್ 2018 (06:40 IST)
ನವದೆಹಲಿ : ಹೃದಯ ಶಸ್ತ್ರ ಚಿಕಿತ್ಸೆ ವೇಳೆ ಮಹಿಳೆಯೊಬ್ಬಳ ಮೇಲೆ ವೈದ್ಯರು ಅತ್ಯಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.


45 ವರ್ಷದ ಮಹಿಳೆಯೊಬ್ಬರು ಉಸಿರಾಟದ ಸಮಸ್ಯೆ ಎಂದು ಗೋವಿಂದ್ ಬಲಾದ್ ಪಂಥ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಮಹಿಳೆಗೆ ಹೃದಯ ಸಮಸ್ಯೆ ಇದೆ ಅನ್ನೋದನ್ನು ವೈದ್ಯರು ಪತ್ತೆ ಹಚ್ಚಿ ಆಪರೇಷನ್ಗೆ ಸೂಚಿಸಿದ್ದರಂತೆ. ಆ ಪ್ರಕಾರ ಸೆಪ್ಟೆಂಬರ್ 12ರಂದು ಆಕೆಗೆ ಆಪರೇಷನ್ ನಡೆಸಲಾಗಿದೆ. ಆದರೆ ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಮಹಿಳೆಯ ಮೇಲೆ ವೈದ್ಯರು ಅತ್ಯಾಚಾರ ಎಸಗಿದ್ದಾರೆ. ಆಪರೇಷನ್ ಆದನಂತರ  ಈ ವಿಚಾರ ಆಕೆಗೆ  ತಿಳಿದಿದ್ದು, ಪೊಲೀಸರಿಗೆ ದೂರು ನೀಡಿದ್ದಾಳೆ.


ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಅಲ್ಲದೇ ಮಹಿಳೆಯ ಕುಟಂಬಸ್ಥರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಗೆ ಪತ್ರವನ್ನು ಬರೆದು ಪ್ರಕರಣದ ಬಗ್ಗೆ ಗಮನ ಸೆಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ನಟಿ ನಿಳನಿ