ಹೈದರಾಬಾದ್: ಆಗಸ್ಟ್ ನಲ್ಲಿ ಅಷ್ಟಬಂಧ ಬಾಲಾಲಯ ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮ ನಿಮಿತ್ತ ಆರು ದಿನಗಳ ಕಾಲ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದೇವಾಲಯ ಬಾಗಿಲು ಬಂದ್ ಮಾಡಲು ನಿರ್ಧರಿಸಿದ್ದ ಟಿಟಿಡಿ ಅಧಿಕಾರಿಗಳಿಗೆ ಆಂಧ್ರ ಸಿಎಂ ಸೂಚನೆ ನೀಡಿದ್ದಾರೆ.
ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮ ನಿಮಿತ್ತ ಆಗಸ್ಟ್ 11 ರಿಂದ 16 ರವರೆಗೆ ಭಕ್ತರಿಗೆ ಪ್ರವೇಶವಿಲ್ಲ ಎಂದು ಟಿಟಿಡಿ ಪ್ರಕಟಿಸಿತ್ತು. ಆದರೆ ಇದಕ್ಕೆ ಸಿಎಂ ಚಂದ್ರಬಾಬು ನಾಯ್ಡು ಬಾಬು ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ಭಕ್ತರಿಗೆ ತೊಂದರೆಯಾಗುತ್ತದೆ. ಸಂಪ್ರೋಕ್ಷಣೆ ಹೆಸರಿನಲ್ಲಿ ಭಕ್ತರಿಗೆ ತೊಂದರೆ ಮಾಡಬೇಡಿ ಎಂದಿದ್ದಾರೆ. ಈ ಹಿನ್ನಲೆಯಲ್ಲಿ ಭಕ್ತರಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲು ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಆಗಮನ ಶಾಸ್ತ್ರದ ಪ್ರಕಾರ ಸಂಪ್ರೋಕ್ಷಣೆ ನಡೆಯಲಿ. ಆದರೆ ಭಕ್ತರಿಗೂ ದರ್ಶನಕ್ಕೆ ವ್ಯವಸ್ಥೆ ಮಾಡಿ ಎಂದು ಸಿಎಂ ಚಂದ್ರಬಾಬು ನಾಯ್ಡು ಟಿಟಿಡಿ ಅಧಿಕಾರಿಗಳಿಗೆ ಸೂಚಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.