ಹುಬ್ಬಳ್ಳಿ : ರಾಷ್ಟ್ರಧ್ವಜ ತಯಾರಿಸಲು ಮತ್ತು ಖಾದಿ ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ಲ್ಯಾಗ್ ಕೋಡ್ ಆಫ್ ಇಂಡಿಯಾ 2002 ಅಮೆಂಡ್ ಮೆಂಟ್ ಜಾರಿಗೆ ತಂದಿತ್ತು.
ಇಷ್ಟು ದಿನ ಈ ಕೋಡ್ ಆಧಾರದ ಮೇಲೆಯೇ ಧ್ವಜ ತಯಾರಾಗುತ್ತಿತ್ತು. ಈ ಕೋಡ್ ಪ್ರಕಾರ ಖಾದಿ, ಉಲನ್, ಸಿಲ್ಕ್ ಬಟ್ಟೆಗಳಿಂದ ಧ್ವಜ ತಯಾರಾಗುತ್ತಿತ್ತು.
ಇದೀಗ 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಕೇಂದ್ರ ಸರ್ಕಾರ, ಈ ನಿಯಮಕ್ಕೆ ಬದಲಾವಣೆ ತಂದಿದೆ. ಇದರ ಅನುಸಾರ ಪಾಲಿಸ್ಟರ್ ಬಟ್ಟೆ ಮತ್ತು ಯಂತ್ರಗಳಿಂದ ಧ್ವಜ ತಯಾರು ಮಾಡಲು ಅನುಮತಿ ನೀಡಿದೆ.
ಇದು ಕರ್ನಾಟಕ ಖಾದಿ ಬಟ್ಟೆ ನೇಯುವ ಸಾವಿರಾರು ಕುಟುಂಬಗಳಿಗೆ ಬರಸಿಡಲು ಬಡಿದಂತಾಗಿದೆ.
ಮೊದಲೇ ಕುಂಟುತ್ತಾ ಸಾಗಿರುವ ಖಾದಿ ಉದ್ಯಮ ಈ ನಿಯಮದಿಂದ ಶಾಶ್ವತವಾಗಿ ಮುಚ್ಚುವ ಹಂತ ತಲುಪಿದೆ. 75ನೇ ಸ್ವಾತಂತ್ರೋತ್ಸವದ ಹಿನ್ನೆಲೆ ಕೇಂದ್ರ ಸರ್ಕಾರ ಲಕ್ಷಾಂತರ ಧ್ವಜ ತಯಾರಿಸಲು ಇದೇ ಸಂಘಕ್ಕೆ ಹೇಳಿತ್ತು. ಸರ್ಕಾರವನ್ನು ನಂಬಿ ಕೋಟ್ಯಂತರ ವೆಚ್ಚದಲ್ಲಿ ಧ್ವಜ ತಯಾರಿಸಲು ಸಂಘ ಕೂಡಾ ಮುಂದಾಗಿತ್ತು. ಇದೀಗ ಏಕಾಏಕಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.