ಪ್ರತಿದಿನವೂ ಅದ್ಧೂರಿಯಾಗಿ ಪೂಜೆ ನಡೀತಿದೆ. ಇದು ವಿವಾದದ ಸುಳಿಯಲ್ಲಿ ಸಿಲುಕಿದೆ! ಗರ್ಭಗುಡಿ ಎದುರೇ ಹಾಸನಾಂಬೆ ಕಳಶ ಪ್ರತಿಷ್ಠಾಪನೆ.
ಪ್ರತಿದಿನವೂ ವಿಶೇಷ ಪೂಜೆ. ವಿಭಿನ್ನ ಅಲಂಕಾರ. ಅಧಿದೇವತೆಯ ದರ್ಶನಕ್ಕೆ ಭಕ್ತರ ಆಗಮನ. ವರ್ಷಕ್ಕೊಮ್ಮೆ ದರ್ಶನ ನೀಡ್ತಿದ್ದ ಅಧಿದೇವತೆಯನ್ನ ನಿತ್ಯ ಪೂಜೆ ಮಾಡ್ತಿರೋದೇ ವಿವಾದ ಎಬ್ಬಿಸಿದೆ. ಭಕ್ತರನ್ನ ಕೆರಳುವಂತೆ ಮಾಡಿದೆ.
ಹಾಸನದಲ್ಲಿ ವರ್ಷಕ್ಕೊಮ್ಮೆ ಶಕ್ತಿದೇವತೆ ಹಾಸನಾಂಬೆ ಭಕ್ತರಿಗೆ ದರ್ಶನ ನೀಡುತ್ತಾಳೆ. ಬಲಿಪಾಡ್ಯಮಿಯ ಮಾರನೇ ದಿನ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಿದ್ರೆ ಮತ್ತೆ ತೆರೆಯೋದು ಮುಂದಿನ ವರ್ಷವೇ. ಅಲ್ದೆ, ವಾರದಲ್ಲಿ ಎರಡು ದಿನ ದೇಗುಲದ ಇತರೆ ಎರಡು ಬಾಗಿಲು ತೆಗೆದು ಗರ್ಭಗುಡಿ ಬಾಗಿಲಿಗೆ ಪೂಜೆ ನಡೆಯುತ್ತೆ.
ಉಳಿದಂತೆ ದೇಗುಲ ಕ್ಲೋಸ್ ಆಗಿರುತ್ತೆ. ಆದ್ರೆ, ಕೆಲ ದಿನಗಳಿಂದ ಗರ್ಭಗುಡಿ ಬಾಗಿಲಿನ ಎದುರು ಹಾಸನಾಂಬೆ ಗರ್ಭಗುಡಿ ಒಳಗಿರುವಂತೆ ಮೂರ್ತಿಗಳನ್ನ ಪ್ರತಿಷ್ಠಾಪಿಸಲಾಗಿದೆ. ಸೀರೆ ಹೂಗಳಿಂದ ಅಲಂಕಾರ ಮಾಡಿ ಪೂಜೆ ನಡೆಸಲಾಗುತ್ತಿದೆ.. ಆದ್ರೆ ಅರ್ಚಕರು ಕಾಣಿಕೆ ಹುಂಡಿ ಇಟ್ಟು ಹಣದಾಸೆಗೆ ಹೀಗೆ ಮಾಡುತ್ತಿದ್ದಾರೆ.
ಇದ್ರಿಂದ ದೇಗುಲದ ಮಹತ್ವ ಹಾಳಾಗುತ್ತೆ ಅಂತಾ ಭಕ್ತರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು, ಕಳೆದ ವರ್ಷ ಅಕ್ಟೋಬರ್ ಕೊನೆಯವಾರ ಆರಂಭಗೊಂಡಿದ್ದ ಹಾಸನಾಂಬೆ ದರ್ಶನ ನವೆಂಬರ್ 6ಕ್ಕೆ ಕೊನೆಯಾಗಿತ್ತು. ಆದ್ರೆ ಕಳೆದ ಒಂದೆರಡು ವಾರಗಳಿಂದ ಹೀಗೆ ಹೊಸ ರೀತಿಯ ಪೂಜೆ ನಡೆಯುತ್ತಿರೋದು ಏಕೆ ಅನ್ನೋ ಅನುಮಾನ ಮೂಡಿದೆ. ಈ ಬಗ್ಗೆ ಅರ್ಚಕರನ್ನ ಕೇಳಿದ್ರೆ ಹಳೇ ಕಾಲದಿಂದ್ಲೂ ಪೂಜೆ ನಡೀತಿದೆ. ಈಗ ಅಲಂಕಾರ ಮಾಡಿ ಪೂಜೆ ಮಾಡ್ತಿದ್ದೇವೆ ಅಷ್ಟೇ ಅಂತಿದ್ದಾರೆ.