ಬರ್ನ್ : ಸ್ವಿಟ್ಜರ್ಲೆಂಡ್ನಲ್ಲಿ ಬುರ್ಖಾ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ 83 ಸಾವಿರ ರೂ. ದಂಡ ವಿಧಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ.
ಭಾರತದಲ್ಲಿ ಹಿಜಬ್ ಬೇಕು, ನಮ್ಮ ಆಯ್ಕೆ, ಇಸ್ಲಾಂ ಅವಿಭಾಜ್ಯ ಅಂಗ ಎಂದು ಹೋರಾಟ ನಡೆಯುತ್ತಿದೆ. ಆದರೆ ಇರಾನ್ನಲ್ಲಿ ಹಿಜಬ್ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಹಲವು ಪ್ರತಿಭಟನಾಕಾರರು ಗುಂಡಿಗೆ ಬಲಿಯಾಗಿದ್ದಾರೆ.
ಈ ಹೋರಾಟ, ವಾದ-ವಿವಾದಗಳ ನಡುವೆ ಸ್ವಿಟ್ಜರ್ಲೆಂಡ್ನಲ್ಲಿ ಬುರ್ಖಾ ಬ್ಯಾನ್ ಹಾಗೂ ಈ ನಿಯಮ ಉಲ್ಲಂಘಿಸಿದರೆ 82,000 ರೂಪಾಯಿ ದಂಡ ವಿಧಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೇ ತಿಂಗಳ ಅಕ್ಟೋಬರ್ 12 ರಂದು ಸ್ವಿಟ್ಜರ್ಲೆಂಡ್ ಸಂಸತ್ತಿನಲ್ಲಿ ಈ ಮಸೂದೆ ಮಂಡಿಸಲಾಗಿದೆ.
ಕಳೆದ ವರ್ಷ ಸ್ವಿಟ್ಜರ್ಲೆಂಡ್ನಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಸುರಕ್ಷತೆ ಹಾಗೂ ಇತರ ಕಾರಣಗಳಿಂದ ಮುಖ ಮುಚ್ಚುವ ವಸ್ತ್ರಗಳನ್ನು ನಿಷೇಧಿಸಲು ಮತದಾನ ಮಾಡಲಾಗಿತ್ತು. ಇದೀಗ ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಪ್ರಸ್ತಾವನೆ ಕರಡು ಮಸೂದೆಯನ್ನು ಸಲ್ಲಿಸಲಾಗಿದೆ.