ವಾಷಿಂಗ್ಟನ್ : ಭಾರತದ ನಂ.1 ಶ್ರೀಮಂತ ವ್ಯಕ್ತಿ, ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿ ಅವರು ಇತ್ತೀಚೆಗಷ್ಟೇ ಅಮೆಜಾನ್ನ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ, ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಪಡೆದಿದ್ದರು.
ಆದರೆ ಅದಾನಿಯವರು ಈಗ ಮತ್ತೆ ಬ್ಲೂಮ್ಬರ್ಗ್ ಇಂಡೆಕ್ಸ್ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಇಂದಿನ ಹೊಸ ನವೀಕರಣದಲ್ಲಿ ಗೌತಮ್ ಅದಾನಿಯವರ ಸಂಪತ್ತಿನ ಮೌಲ್ಯ 135 ಬಿಲಿಯನ್ ಡಾಲರ್(ಸುಮಾರು 10.98 ಲಕ್ಷ ಕೋಟಿ ರೂ.)ಗಳಷ್ಟಿದೆ.
10 ದಿನಗಳ ಹಿಂದೆ ಅದಾನಿಯವರ ಸಂಪತ್ತು 154.7 ಬಿಲಿಯನ್ ಡಾಲರ್(12.33 ಲಕ್ಷ ಕೋಟಿ ರೂ.)ಗಳಷ್ಟಿತ್ತು. ಅವರು ಇತ್ತೀಚೆಗೆ 6.9 ಬಿಲಿಯನ್ ಡಾಲರ್(ಸುಮಾರು 56 ಸಾವಿರ ಕೋಟಿ ರೂ.) ಸಂಪತ್ತು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.