Webdunia - Bharat's app for daily news and videos

Install App

ಪಂಜಾಬ್‌ನಲ್ಲಿ AAP ಭರ್ಜರಿ ಮುನ್ನಡೆ

Webdunia
ಗುರುವಾರ, 10 ಮಾರ್ಚ್ 2022 (11:21 IST)
ಚಂಡೀಗಢ : ಪಂಜಾಬ್ ವಿಧಾನಸಭಾ ಚುನಾವಣೆ ಮತ ಎಣಿಕೆಯಲ್ಲಿ ಆಮ್ ಆದ್ಮಿ ಪಕ್ಷ ೮೮ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕ್ಲೀನ್ ಸ್ವೀಪ್ ಸಾಧನೆಯತ್ತ ಸಾಗಿದೆ.
 
ಕಳೆದ 70 ವರ್ಷಗಳಿಂದ ಪಂಜಾಬ್ ರಾಜ್ಯವನ್ನು ಆಳಿದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ  ಸಾಂಪ್ರದಾಯಿಕ ಪಕ್ಷಗಳಿಗಿಂತ ಈಗ ಎಎಪಿ ಮುನ್ನಡೆ ಸಾಧಿಸಲು ಐದು ಪ್ರಮುಖ ಕಾರಣಗಳಿವೆ. ಪಂಜಾಬ್ನಲ್ಲಿ ಬಿಜೆಪಿ-ಅಕಾಲಿದಳ, ಕಾಂಗ್ರೆಸ್ ಸರ್ಕಾರಗಳ ಆಡಳಿತವನ್ನು ನೋಡಿದ್ದರು.

ಹೊಸ ಪಕ್ಷಕ್ಕೆ ಅಧಿಕಾರ ನೀಡುವ ಬಯಕೆಯನ್ನು ಹೊಂದಿದ್ದರು. ಇದಕ್ಕೆ ಪೂರಕ ಎನ್ನುವಂತೆ ಒಂದು ಅವಕಾಶವನ್ನು ಎಎಪಿ ಕೇಳಿತ್ತು. ದೆಹಲಿ ಸರ್ಕಾರದ ಜನಪ್ರಿಯ ಯೋಜನೆಗಳು ಪಂಜಾಬ್ ಜನರ ಗಮನ ಸೆಳೆದಿವೆ.

ಶಾಲೆಗಳ ಅಭಿವೃದ್ಧಿ, ಉಚಿತ ವಿದ್ಯುತ್ – ನೀರು ಜನರನ್ನು ಸೆಳೆಯಲು ಮತ್ತೊಂದು ಕಾರಣವಾಗಿದೆ. ಬಿಜೆಪಿಗೆ ಅಸ್ತಿತ್ವ ಇಲ್ಲ, ಮಾಜಿ ಸಿಎಂ ಅಮರೀಂದರ್ ಸಿಂಗ್ ವಯಸ್ಸಿನ ಕಾರಣ ಪಂಜಾಬ್ ಜನರು ಕೈ ಬಿಟ್ಟರು ಎಂದು ವಿಶ್ಲೇಷಿಸಲಾಗಿದೆ.

ಅಕಾಲಿದಳ ಬಿಜೆಪಿ ಜೊತೆಗಿದ್ದ ಕಾರಣ ಮತ್ತು ಈಗಾಗಲೇ ಆಡಳಿತ ನೋಡಿರುವ ಕಾರಣ ಜನ ತಿರಸ್ಕರಿಸಿದ್ದಾರೆ. ಇನ್ನು ಕಾಂಗ್ರೆಸ್ ಒಳ ಬಂಡಾಯ, ನಾಯಕರ ನಡುವಿನ ಜಗಳ, ಸಿಎಂ ಅಭ್ಯರ್ಥಿ ಘೋಷಣೆ ವಿಳಂಬವೂ ಆಪ್ಗೆ ನೆರವುವಾಗಿದೆ.

ಕಳೆದ ಬಾರಿ ಎರಡನೇ ಅತಿದೊಡ್ಡ ಪಕ್ಷವಾಗಿದ್ದ ಆಪ್ ಈ ಬಾರಿ ಅದ್ಭುತವಾಗಿ ಆಗಿ ಪ್ರಚಾರ ನಡೆಸಿತ್ತು. ಗೊಂದಲಗಳಿಗೆ ಅವಕಾಶ ನೀಡದೇ ಅಭಿವೃದ್ಧಿಯ ಮೇಲೆ ಚುನಾವಣೆಗೆ ತೆರಳಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments