ಚಂಡೀಗಢ : ಪಂಜಾಬ್ ವಿಧಾನಸಭಾ ಚುನಾವಣೆ ಮತ ಎಣಿಕೆಯಲ್ಲಿ ಆಮ್ ಆದ್ಮಿ ಪಕ್ಷ ೮೮ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕ್ಲೀನ್ ಸ್ವೀಪ್ ಸಾಧನೆಯತ್ತ ಸಾಗಿದೆ.
ಕಳೆದ 70 ವರ್ಷಗಳಿಂದ ಪಂಜಾಬ್ ರಾಜ್ಯವನ್ನು ಆಳಿದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ ಸಾಂಪ್ರದಾಯಿಕ ಪಕ್ಷಗಳಿಗಿಂತ ಈಗ ಎಎಪಿ ಮುನ್ನಡೆ ಸಾಧಿಸಲು ಐದು ಪ್ರಮುಖ ಕಾರಣಗಳಿವೆ. ಪಂಜಾಬ್ನಲ್ಲಿ ಬಿಜೆಪಿ-ಅಕಾಲಿದಳ, ಕಾಂಗ್ರೆಸ್ ಸರ್ಕಾರಗಳ ಆಡಳಿತವನ್ನು ನೋಡಿದ್ದರು.
ಹೊಸ ಪಕ್ಷಕ್ಕೆ ಅಧಿಕಾರ ನೀಡುವ ಬಯಕೆಯನ್ನು ಹೊಂದಿದ್ದರು. ಇದಕ್ಕೆ ಪೂರಕ ಎನ್ನುವಂತೆ ಒಂದು ಅವಕಾಶವನ್ನು ಎಎಪಿ ಕೇಳಿತ್ತು. ದೆಹಲಿ ಸರ್ಕಾರದ ಜನಪ್ರಿಯ ಯೋಜನೆಗಳು ಪಂಜಾಬ್ ಜನರ ಗಮನ ಸೆಳೆದಿವೆ.
ಶಾಲೆಗಳ ಅಭಿವೃದ್ಧಿ, ಉಚಿತ ವಿದ್ಯುತ್ – ನೀರು ಜನರನ್ನು ಸೆಳೆಯಲು ಮತ್ತೊಂದು ಕಾರಣವಾಗಿದೆ. ಬಿಜೆಪಿಗೆ ಅಸ್ತಿತ್ವ ಇಲ್ಲ, ಮಾಜಿ ಸಿಎಂ ಅಮರೀಂದರ್ ಸಿಂಗ್ ವಯಸ್ಸಿನ ಕಾರಣ ಪಂಜಾಬ್ ಜನರು ಕೈ ಬಿಟ್ಟರು ಎಂದು ವಿಶ್ಲೇಷಿಸಲಾಗಿದೆ.
ಅಕಾಲಿದಳ ಬಿಜೆಪಿ ಜೊತೆಗಿದ್ದ ಕಾರಣ ಮತ್ತು ಈಗಾಗಲೇ ಆಡಳಿತ ನೋಡಿರುವ ಕಾರಣ ಜನ ತಿರಸ್ಕರಿಸಿದ್ದಾರೆ. ಇನ್ನು ಕಾಂಗ್ರೆಸ್ ಒಳ ಬಂಡಾಯ, ನಾಯಕರ ನಡುವಿನ ಜಗಳ, ಸಿಎಂ ಅಭ್ಯರ್ಥಿ ಘೋಷಣೆ ವಿಳಂಬವೂ ಆಪ್ಗೆ ನೆರವುವಾಗಿದೆ.
ಕಳೆದ ಬಾರಿ ಎರಡನೇ ಅತಿದೊಡ್ಡ ಪಕ್ಷವಾಗಿದ್ದ ಆಪ್ ಈ ಬಾರಿ ಅದ್ಭುತವಾಗಿ ಆಗಿ ಪ್ರಚಾರ ನಡೆಸಿತ್ತು. ಗೊಂದಲಗಳಿಗೆ ಅವಕಾಶ ನೀಡದೇ ಅಭಿವೃದ್ಧಿಯ ಮೇಲೆ ಚುನಾವಣೆಗೆ ತೆರಳಿತ್ತು.