ಕರ್ನಾಟಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.33 ರಷ್ಟು ಜಿಎಸ್ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ.
10,996 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ 8,259 ಕೋಟಿ ರೂ. ಸಂಗ್ರಹವಾಗಿತ್ತು.
ಇನ್ನೂ ರಾಜ್ಯಗಳ ಪೈಕಿ ಈ ಬಾರಿಯೂ ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚಿನ ಜಿಎಸ್ಟಿ ಸಂಗ್ರಹವಾಗಿದೆ. ಕಳೆದ ವರ್ಷ 19,355 ಕೋಟಿ ರೂ.
ಸಂಗ್ರಹವಾಗಿದ್ದ ಮಹಾರಾಷ್ಟ್ರಕ್ಕೆ 23,037 ಕೋಟಿ ಜಿಎಸ್ಟಿ ಹರಿದುಬಂದಿದ್ದು, ಕಳೆದ ವರ್ಷಕ್ಕಿಂತ ಶೇ.19 ರಷ್ಟು ಹೆಚ್ಚಾಗಿದೆ. ಗುಜರಾತ್ 9,469 ಕೋಟಿ ರೂ., ತಮಿಳುನಾಡು 9,540 ಕೋಟಿ ರೂ., ಪಶ್ಚಿಮ ಬಂಗಾಳ 5,367 ಕೋಟಿ ರೂ., ತೆಲಂಗಾಣಕ್ಕೆ 4,284 ಕೋಟಿ ರೂ., ಒಡಿಶಾಗೆ 3,769 ಕೋಟಿ ರೂ. ಹಾಗೂ ಆಂಧ್ರಪ್ರದೇಶದಲ್ಲಿ 3,579 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ.