ಬೆಂಗಳೂರು: ಕಿರುತೆರೆಯ ಖ್ಯಾತ ಜೋಡಿ ಅಮೃತಾ ರಾಮಮೂರ್ತಿ-ರಘು ದಂಪತಿ ತಮ್ಮ ಮದುವೆ ವಾರ್ಷಿಕೋತ್ಸವ ದಿನವೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಕುಲವಧು ಖ್ಯಾತಿಯ ಅಮೃತಾ ಹಾಗೂ ನಮ್ಮನೆ ಯುವರಾಣಿ ಧಾರವಾಹಿ ಖ್ಯಾತಿಯ ರಘು ನಿನ್ನೆ ಎರಡನೇ ವರ್ಷದ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೇ ದಿನದಂದು ಅವರು ಅಭಿಮಾನಿಗಳಿಗೆ ತಾವು ಇಬ್ಬರಿಂದ ಮೂವರಾಗಲಿದ್ದೇವೆ ಎಂದು ಸಿಹಿ ಸುದ್ದಿ ನೀಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿಯಲ್ಲಿ ಜೊತೆಯಾಗಿದ್ದ ನಟಿಸಿದ್ದ ವೇಳೆ ಇಬ್ಬರ ನಡುವೆ ಸ್ನೇಹ ಚಿಗುರಿತ್ತು. ಬಳಿಕ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಅಮೃತಾ ತಾವು ತಾಯಿಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಉದಯ ವಾಹಿನಿಯಲ್ಲಿ ತಾವು ಅಭಿನಯಿಸುತ್ತಿದ್ದ ಧಾರವಾಹಿಯಿಂದ ಹೊರಬಂದಿದ್ದರು.