Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇನ್ನೆಂದೂ ಪಾಕ್ ಕಲಾವಿದರನ್ನು ಬಳಸುವುದಿಲ್ಲ ಎಂದ ನಿರ್ಮಾಪಕರು

ಇನ್ನೆಂದೂ ಪಾಕ್ ಕಲಾವಿದರನ್ನು ಬಳಸುವುದಿಲ್ಲ ಎಂದ ನಿರ್ಮಾಪಕರು
Mumbai , ಭಾನುವಾರ, 23 ಅಕ್ಟೋಬರ್ 2016 (08:48 IST)
ಮುಂಬೈ: ಇನ್ನೆಂದೂ ಬಾಲಿವುಡ್  ಸಿನಿಮಾಗಳಲ್ಲಿ ಪಾಕಿಸ್ತಾನ ಮೂಲದ ಕಲಾವಿದರನ್ನು ಬಳಸುವುದಿಲ್ಲ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಮುಖೇಶ್ ಭಟ್ ಹೇಳಿದ್ದಾರೆ.

ನಿರ್ಮಾಪಕರು, ಎಂಎನ್ಎಸ್ ಕಾರ್ಯಕರ್ತರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ನಡುವೆ ನಡೆದ ಸಂಧಾನ ಸಭೆಯ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಕರಣ್ ಜೋಹರ್ ನಿರ್ಮಾಣದ “ಏ ದಿಲ್ ಹೇ ಮುಷ್ಕಿಲ್” ಚಿತ್ರದಲ್ಲಿ ಪಾಕ್ ಕಲಾವಿದನನ್ನು ಬಳಸಿಕೊಂಡಿದ್ದಕ್ಕೆ ಎಂಎನ್ಎಸ್ ಕಾರ್ಯಕರ್ತರು ಪ್ರತಿಭಟನೆಯ ಬೆದರಿಕೆ ಹಾಕಿದ್ದರು.

ಹೀಗಾಗಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ನಿರ್ಮಾಪಕರು ಸಂಧಾನ ಸಭೆ ನಡೆಸಿದ್ದರು.  ಏ ದಿಲ್ ಹೇ ಮುಷ್ಕಿಲ್ ಚಿತ್ರ ಪ್ರದರ್ಶನದ ಮೊದಲು ಉರಿ ದಾಳಿಯಲ್ಲಿ ಮೃತರಾದ ಉಗ್ರರಿಗೆ ಗೌರವ ನಮನ ಸಲ್ಲಿಸಲಾಗುವುದು. ದಾಳಿಯಲ್ಲಿ ಮೃತರಾದ ಸೈನಿಕರ ಕುಟುಂಬಕ್ಕೆ ಸಹಾಯ ಮಾಡುವುದಾಗಿಯೂ ನಿರ್ಮಾಪಕರು ಭರವಸೆಯಿತ್ತರು.

ಈ ಆಶ್ವಾಸನೆಗಳ ನಂತರ ಕೊಂಚ ಮೆತ್ತಗಾದ ಎಂಎನ್ಎಸ್ ಕಾರ್ಯಕರ್ತರು ಚಿತ್ರ ಬಿಡುಗಡೆಗೆ ಅಡ್ಡಿ ಮಾಡದಿರಲು ನಿರ್ಧರಿಸಿದ್ದಾರೆ. ಹೀಗಾಗಿ ದೀಪಾವಳಿ ಸಂದರ್ಭ ಚಿತ್ರ ನಿರಾಂತಕವಾಗಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ಸೂಪರ್ ಸ್ಟಾರ್ ವಿಜಯ್‌ರೊಂದಿಗೆ ಸನ್ನಿ ಲಿಯೋನ್ ಐಟಂ ಡ್ಯಾನ್ಸ್?