ಬೆಂಗಳೂರು: ಜನಪ್ರಿಯ ಗಟ್ಟಿಮೇಳ ಧಾರವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ನಿಶಾ ರವಿಕೃಷ್ಣನ್ ತೆಲುಗಿನಲ್ಲೂ ಒಂದು ಧಾರವಾಹಿಯಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದಾರೆ.
ಆದರೆ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತೆಲುಗಿನಲ್ಲೇ ರೀಲ್ಸ್, ಪೋಸ್ಟ್ ಮಾಡುತ್ತಿರುವುದರಿಂದ ತೀವ್ರ ಟೀಕೆಗೊಳಗಾಗಿದ್ದರು. ತೆಲುಗಿನಲ್ಲಿ ಜನಪ್ರಿಯತೆ ಬಂದ ಮೇಲೆ ಕನ್ನಡವನ್ನು ಮರೆತಿದ್ದೀರಾ ಎಂದು ಅವರ ಪ್ರತೀ ಪೋಸ್ಟ್ ಗೂ ನೆಟ್ಟಿಗರು ಖಾರವಾಗಿ ಕಾಮೆಂಟ್ ಮಾಡುತ್ತಿದ್ದರು. ಇದರಿಂದ ನೊಂದ ನಿಶಾ ಈಗ ಲೈವ್ ಬಂದು ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ಯಾವತ್ತಿಗೂ ಕನ್ನಡದವಳೇ. ನಾನು ಎಲ್ಲೇ ಹೋದರೂ ನನ್ನ ಮೂಲ ಕನ್ನಡೆ ಎಂಬುದನ್ನು ಮರೆಯಲ್ಲ. ತೆಲುಗಿನಲ್ಲಿ ನನ್ನ ಸಹನಟರ ಒತ್ತಾಯದ ಮೇರೆಗೆ ತೆಲುಗಿನಲ್ಲಿ ಅವರ ಜೊತೆ ಸಪೋರ್ಟ್ ಕೊಡಲು ರೀಲ್ಸ್ ಮಾಡುತ್ತೇನಷ್ಟೇ. ಕನ್ನಡದಲ್ಲೂ ಸಾಕಷ್ಟು ಸಲ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದೇನೆ. ನನಗೆ ಭಾಷೆ ಬೇಧಭಾವ ಇಲ್ಲ. ದಯವಿಟ್ಟು ಯಾರೂ ಆ ರೀತಿ ಅಪಾರ್ಥ ಮಾಡಿಕೊಳ್ಳಬೇಡಿ. ನಿಮಗೆಂದೇ ನಾಳೆ ನಾನು ನನ್ನ ಗಟ್ಟಿಮೇಳ ಧಾರವಾಹಿಯ ನಟರೊಂದಿಗೆ ಒಂದು ವಿಶೇಷ ಪೋಸ್ಟ್ ಹಾಕಲಿದ್ದೇನೆ. ನಾನು ತೆಲುಗಿಗೆ ಹೋಗಿ ಕನ್ನಡ ಮರೆತೆ ಎಂದು ಮಾತ್ರ ಯಾರೂ ತಪ್ಪಾಗಿ ಭಾವಿಸಬೇಡಿ ಎಂದು ನಿಶಾ ಸ್ಪಷ್ಟನೆ ಕೊಟ್ಟಿದ್ದಾರೆ.