ಯಾವುದೇ ಸಿನಿಮಾಕ್ಕೆ ಕಮ್ಮಿ ಇಲ್ಲದಂತೆ ಇತ್ತೀಚಿನ ಧಾರಾವಾಹಿಗಳು ಅದ್ಧೂರಿಯಾಗಿ ಮೂಡಿಬರುತ್ತಿವೆ. ಅದಕ್ಕೆ ಒಂದು ಉದಾಹರಣೆ ನಿಹಾರಿಕಾ ಧಾರಾವಾಹಿ, ಮತ್ತು ನಿಶ್ಚಿತಾರ್ಥ. ನಿಹಾರಿಕಾಗೆ ವಿರಾಟ್ ಸ್ವಲ್ಪವೂ ಇಷ್ಟವಿಲ್ಲ. ಅವನನ್ನು ಮನಸಾರೆ ದ್ವೇಷಿಸುತ್ತಾಳೆ. ಇವನೋ ಅವಳನ್ನು ಹೃದಯದಲ್ಲಿರಿಸಿಕೊಂಡು ಪ್ರೀತಿಸುತ್ತಿದ್ದಾನೆ.
ಅವಳ ಒಂದು ಕಣ್ಣೋಟಕ್ಕೆ, ಪ್ರೀತಿಯ ಮಾತಿಗೆ ಹಾತೊರೆಯುತ್ತಿದ್ದಾನೆ. ಆದರೆ ಕೊನೆಗೂ ವಿರಾಟ್‍ನನ್ನು ವರಿಸಲು ನಿಹಾರಿಕಾ ಮನಸ್ಸು ಮಾಡಿದ್ದಾಳೆ. ಅದರ ಮೊದಲ ಹಂತವೇ ಈ ನಿಶ್ಚಿತಾರ್ಥ. ವಿರಾಟ್ ಮತ್ತು ನಿಹಾರಿಕಾ ಎಂಗೇಜ್‍ಮೆಂಟ್‍ಗೆ ಜೆಡ್ ರೆಸಾರ್ಟ್ ಶೃಂಗಾರಗೊಂಡಿತ್ತು. ಭರ್ಜರಿ ಲೈಟಿಂಗ್ ವ್ಯವಸ್ಥೆ, ವೇದಿಕೆಗಳನ್ನು ನಿರ್ಮಿಸಲಾಗಿತ್ತು.
ಇದೆಲ್ಲದಕ್ಕಿಂತ ಇದರ ಪ್ರಮುಖ ಆಕರ್ಷಣೆ ನಿಹಾರಿಕಾ ಸೀರೆ. ನಿಹಾರಿಕಾ ಉಟ್ಟಿರುವ ಸೀರೆ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ. 18 ಕ್ಯಾರೆಟ್ ಅಪ್ಪಟ ಬಂಗಾರದ ಜರಿಗಳನ್ನು ಬಳಸಿ ಇದನ್ನು ನೇಯಲಾಗಿದೆ. ಸುಮಾರು 2 ಕೆ.ಜಿ ಭಾರವಿರುವ ಈ ರೇಶ್ಮೆ ಸೀರೆಯಲ್ಲಿ ನಿಹಾರಿಕಾ ರಾಣಿಯಂತೆ ಕಂಗೊಳಿಸುತ್ತಿದ್ದರು.
ನಿಹಾರಿಕಾ ಭಾವಿ ಅತ್ತೆ ಸಾಕ್ಷಿ ಯಾಜಿ ಧರಿಸಿದ್ದ ಸೀರೆ ಕೂಡಾ ಏನು ಕಡಿಮೆ ಇಲ್ಲ. 45 ಸಾವಿರ ಬೆಲೆ ಬಾಳುವ 'ಆರ್ನಿ' ಸೀರೆ ಇದಾಗಿದೆ. ಆರ್ನಿ ಸೀರೆ ತುಂಬಾ ಪ್ಯೂರ್. ಆರ್ನಿ ಸೀರೆಗಳ ನೇಯ್ಗೆ ಆಗುವುದು ಸಾಂಪ್ರದಾಯಿಕ ಕೈಮಗ್ಗದಲ್ಲೇ. ಅದಕ್ಕೆ ಅದರ ಫಿನಿಷಿಂಗ್ ತುಂಬಾ ಚೆನ್ನಾಗಿರುತ್ತೆ.
ಮರೂನ್, ಗೋಲ್ಡ್ ಮತ್ತು ಗ್ರೀನ್ ಬಣ್ಣ ಮಿಶ್ರಿತ ಈ ಸೀರೆ ಯಾರೇ ಉಟ್ಟರೂ ಸರಿ ಚೆನ್ನಾಗಿ ಕಾಣಿಸುತ್ತಾರೆ. ಅದರಲ್ಲೂ ಮದುವೆ ಹೆಣ್ಣಿಗೋಸ್ಕರ ಅಂತನೇ ಸ್ಪೆಷಲ್ ಆಗಿ ಡಿಸೈನ್ ಮಾಡಿದ್ದಾರೆ. ಇದಕ್ಕೆ ಜೈಪುರದ ಪ್ರಖ್ಯಾತ 'ಮೀನಕ್ಕಾರಿ' ಕಲೆಯೇ ಪ್ರೇರಣೆ. 18 ಕ್ಯಾರೆಟ್ ಬಂಗಾರದ ನೂಲು ಮತ್ತು ಅಪ್ಪಟ ರೇಶ್ಮೆ ನೂಲುಗಳನ್ನು ಬಳಸಿ 'ಸಾಫ್ಟ್ ಸಿಲ್ಕ್' ಮಾದರಲ್ಲಿ ಕೈಯಲ್ಲಿ ನೇಯಲಾದ ಸೀರೆ ಇದು.
ಸೀರೆ ಹಗುರವಾಗಿ ಇರಬೇಕು ಅನ್ನೋ ಕಾರಣಕ್ಕೆ ಅತ್ಯಂತ ತೆಳು ರೇಶ್ಮೆ ದಾರಗಳನ್ನು ಬಳಸಲಾಗಿದೆ. ಇದಕ್ಕೆ ತಗುಲಿರುವ ಟೈಂ ಒಂದು ತಿಂಗಳು! ಹೊರಗಡೆ ಮಾರ್ಕೇಟ್‍ನಲ್ಲಿ ಈ ಸೀರೆ ತುಂಬಾ ವಿರಳ ಎಂದು ಹೇಳುತ್ತಾರೆ ಖ್ಯಾತ ಫ್ಯಾಷನ್ ಡಿಸೈನರ್ ಸಂಚರಣ್ ಸುರಾಲ್ ಜೈನ್.
"ಟ್ರೆಡಿಷನಲ್ ಡ್ರೆಸ್‍ಗಳು ಅಂದ್ರೆ ನನಗೆ ತುಂಬಾ ಇಷ್ಟ. ಇದು ನೋಡೋಕೆ ಇಷ್ಟು ಗ್ರ್ಯಾಂಡ್ ಆಗಿದೆ. ಉಟ್ಕೊಳೊಕೆ ತುಂಬಾ ಕಂಫರ್ಟ್ ಆಗಿದೆ. ಸುಮ್ನೆ ಒಡವೆ ಹಾಕ್ಕೊಳೊಕೇ ಹೆಣ್ಣು ಮಕ್ಕಳಿಗೆ ಇಷ್ಟ. ಅದರಲ್ಲೂ ಸೀರೆನೇ ಚಿನ್ನದ್ದಾಗಿದ್ರೆ ಎಷ್ಟು ಚೆನ್ನಾಗಿರುತ್ತೆ" ಅಂತ ತಮ್ಮ ಮುದ್ದು ನಗೆಯನ್ನು ಬೀರುತ್ತಾಳೆ ನಿಹಾರಿಕಾ. `ನಿಹಾರಿಕಾ' ಧಾರಾವಾಹಿ ಸೋಮವಾರದಿಂದ ಶನಿವಾರ ರಾತ್ರಿ 10ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.