ಬೆಂಗಳೂರು: ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಧಾರವಾಹಿಗಳಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಕೂಡಾ ಒಂದು. ಈ ಧಾರವಾಹಿಯಷ್ಟೇ ಇದರಲ್ಲಿ ನಟಿಸಿದ್ದ ಜೆಕೆ-ಅಶ್ವಿನಿ (ಮಯೂರಿ) ಜೋಡಿ ಜನಪ್ರಿಯವಾಗಿತ್ತು.
ಇಂದಿಗೂ ಈ ಎವರ್ ಗ್ರೀನ್ ಜೋಡಿಯನ್ನು ಜನ ಮರೆತಿಲ್ಲ. ಜೆಕೆ ಅಲಿಯಾಸ್ ನಟ ಜಯರಾಮ್ ಕಾರ್ತಿಕ್ ಸದ್ಯಕ್ಕೆ ಸಿನಿಮಾಗಳಲ್ಲಿ ಬ್ಯುಸಿಯಾದರೆ, ನಟಿ ಮಯೂರಿ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ಮಗನ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.
ಇದೀಗ ಈ ಜೋಡಿ ಮತ್ತೆ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದೆ. ಹೊಸ ವರ್ಷಕ್ಕೆ ಹೊಸ ಸುದ್ದಿ ಕೊಟ್ಟಿರುವ ಈ ಜೋಡಿ ಕಲರ್ಸ್ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಜೋಡಿಯಾಗಿ ಕಾಣಿಸುತ್ತಿದೆ. ಇಬ್ಬರೂ ಇದರ ಶೂಟಿಂಗ್ ನಲ್ಲೂ ಭಾಗಿಯಾಗಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿವೆ.