ಬೆಂಗಳೂರು: ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೇ ಕಿರುತೆರೆಯಲ್ಲಿ ಪ್ರತಿನಿತ್ಯದ ಮನರಂಜನೆಯೇ ವಾಹಿನಿಗಳಿಗೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಕಳೆದ ಬಾರಿಯಂತೆ ಮತ್ತೆ ಡಬ್ಬಿಂಗ್ ಧಾರವಾಹಿಗಳು ತೆರೆಗೆ ಬರುವ ನಿರೀಕ್ಷೆಯಿದೆ.
ಈಗಾಗಲೇ ಜೀ ಕನ್ನಡ ವಾಹಿನಿ ಮಧ್ಯಾಹ್ನದ ವೇಳೆ ತೆಲುಗಿನ ಧಾರವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡುವುದಾಗಿ ಘೋಷಣೆ ಮಾಡಿದೆ. ಈ ವಾರ ಕಳೆದರೆ ಹೆಚ್ಚಿನ ಧಾರವಾಹಿಗಳಿಗೆ ಹೊಸ ಎಪಿಸೋಡ್ ಗಳನ್ನು ಪ್ರಸಾರ ಮಾಡುವುದು ಕಷ್ಟವಾಗಲಿದೆ.
ಹೀಗಾಗಿ ಮತ್ತೆ ಶೂಟಿಂಗ್ ಗೆ ಅನುಮತಿ ಸಿಗುವವರೆಗೆ ಇನ್ನಷ್ಟು ವಾಹಿನಿಗಳು, ಡಬ್ಬಿಂಗ್ ಧಾರವಾಹಿಗಳ ಮೊರೆ ಹೋಗಬಹುದು. ಕಳೆದ ಬಾರಿ ಲಾಕ್ ಡೌನ್ ವೇಳೆ ಸಾಕಷ್ಟು ಡಬ್ಬಿಂಗ್ ಧಾರವಾಹಿಗಳಿಂದಾಗಿ ಕನ್ನಡ ಕಲಾವಿದರು, ತಂತ್ರಜ್ಞರು ಕೆಲಸ ಕಳೆದುಕೊಂಡಿದ್ದರು. ಈ ಬಾರಿ 15 ದಿನಕ್ಕೆ ಲಾಕ್ ಡೌನ್ ಮುಗಿಯದೇ ಹೋದಲ್ಲಿ ಕಿರುತೆರೆ ಸಂಕಷ್ಟಕ್ಕೆ ಸಿಲುಕಲಿದೆ.