ನವದೆಹಲಿ: ಒಂದು ಕಾಲದಲ್ಲಿ ಟಿವಿ ಎಂದರೆ ದೂರದರ್ಶನ ಮಾತ್ರ ಎಂಬ ಕಾಲವಿತ್ತು. ಆಗ ಪ್ರಸಾರವಾಗುತ್ತಿದ್ದ ರಾಮಾಯಣ, ಮಹಾಭಾರತ ಧಾರವಾಹಿಗಳನ್ನು ಜನರು ಹೆಚ್ಚು ಕಡಿಮೆ ಆರಾಧಕರಂತೆ ವೀಕ್ಷಿಸುತ್ತಿದ್ದರು.
ಇದೀಗ ಆ ಎರಡೂ ಧಾರವಾಹಿಗಳನ್ನು ದೂರದರ್ಶನ ಮತ್ತೆ ಪ್ರಸಾರ ಮಾಡಲು ಪ್ರಾರಂಭಿಸಿದ್ದು, ಜನ ಅಂದಿನಷ್ಟೇ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ರಾಮಾಯಣ, ಮಧ‍್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಡಿಡಿ ಭಾರತಿಯಲ್ಲಿ ಮಹಾಭಾರತ ಧಾರವಾಹಿ ಪ್ರಸಾರವಾಗಲಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದ್ದು, ಹಲವರು ಮತ್ತೆ ಹಳೆಯ ಕಾಲದ ಧಾರವಾಹಿ ನೋಡಿ ಖುಷಿಪಟ್ಟಿರುವುದಾಗಿ ಟ್ವೀಟ್ ಮಾಡಿದ್ದಾರೆ. ಹಳೆಯ ಧಾರವಾಹಿಗಳನ್ನು ಮರಳಿ ಪ್ರಸಾರ ಮಾಡುವ ಮೂಲಕ ದೂರದರ್ಶನ ವಾಹಿನಿ ಟಿ ಆರ್ ಪಿ ಹೆಚ್ಚಿಸಿಕೊಳ್ಳುವುದರ ಜತೆಗೆ ಹಳೆಯ ಚಾರ್ಮ್ ಗೆ ಮರಳುವುದರಲ್ಲಿ ಸಂಶಯವಿಲ್ಲ.