ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನಿನ್ನೆ ತಮ್ಮ ಪ್ರೇಮ ಕತೆ ಹೇಳಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಅದರಂತೆ ಹರೀಶ್ ರಾಜ್, ಕುರಿ ಪ್ರತಾಪ್, ದೀಪಿಕಾ ದಾಸ್ ತಮ್ಮ ಹಳೆಯ ಲವ್ ಸ್ಟೋರಿಗಳನ್ನು ಹೇಳಿಕೊಂಡರು.
ಅವರಲ್ಲಿ ಹರೀಶ್ ಮತ್ತು ಕುರಿ ಪ್ರತಾಪ್ ತಮ್ಮ ಪತ್ನಿಯನ್ನು ಲವ್ ಮಾಡಿ ಪ್ರಪೋಸ್ ಮಾಡಿದ ಕತೆ ಹೇಳಿದರೆ ದೀಪಿಕಾ ತಮ್ಮ ಪ್ರೇಮ ವೈಫಲ್ಯವನ್ನು ಹೇಳಿಕೊಂಡರು.
ನನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ ಎಂದುಕೊಂಡಿದ್ದೆ. ಅವನ ಜತೆಗೆ ತುಂಬಾ ಕ್ಲೋಸ್ ಆಗಿದ್ದೆ. ಆದರೆ ಕೆಲವು ದಿನಗಳ ನಂತರ ನನ್ನ ಕಲ್ಪನೆಗಳೆಲ್ಲಾ ಸುಳ್ಳು ಅಂತ ಗೊತ್ತಾಯಿತು. ಆತ ಇನ್ನೊಬ್ಬ ಹುಡುಗಿಯ ಜತೆಗೂ ಲವ್ ಮಾಡ್ತಿದ್ದ. ಅಲ್ಲಿಗೆ ನನ್ನ ಕಲ್ಪನೆಗಳೆಲ್ಲಾ ಕುಸಿದುಬಿತ್ತು. ಅಲ್ಲಿಗೆ ಇದು ಸರಿ ಹೋಗಲ್ಲ ಅಂತ ಅವನಿಂದ ಬೇರೆ ಆದೆ. ಈಗಲೂ ಅವನ ಜತೆ ಮಾತನಾಡುತ್ತೇನೆ. ಆದರೆ ಕೇವಲ ಸ್ನೇಹಿತನಾಗಿ. ಅವನೊಂದಿಗೆ ಲವ್ ಖಂಡಿತಾ ಸಾಧ್ಯವಿಲ್ಲ ಎಂದು ದೀಪಿಕಾ ತಮ್ಮ ಪ್ರೇಮ ವೈಫಲ್ಯದ ಕತೆ ಹೇಳಿಕೊಂಡಿದ್ದಾರೆ.