ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ 4 ಆವೃತ್ತಿ ಅಂತಿಮ ಹಂತಕ್ಕೆ ತಲುಪಿದೆ. ಇನ್ನೆರಡೇ ವಾರಗಳಲ್ಲಿ ಈ ಸೀಸನ್ ಮುಗಿಯಲಿದೆ. ಇದಕ್ಕೂ ಮುನ್ನ ನಟ ಭುವನ್ ಪೊನ್ನಣ್ಣ ಮನೆಯಿಂದ ಹೊರಬಿದ್ದಿದ್ದಾರೆ. ಅರ್ಥಾತ್ ಎಲಿಮಿನೇಟ್ ಆಗಿದ್ದಾರೆ.
ಈಗ ಮನೆಯಲ್ಲಿ ಉಳಿದಿರುವವರೆಂದರೆ ಪ್ರಥಮ್, ಮಾಳವಿಕಾ ಅವಿನಾಶ್ ಮತ್ತು ಸ್ಪರ್ಶ ರೇಖಾ. ಇನ್ನೆರಡು ವಾರಗಳಲ್ಲಿ ಅಂತಿಮ ಸ್ಪರ್ಧಿ ಯಾರು ಎಂಬುದು ಗೊತ್ತಾಗಲಿದೆ. ವಿಶೇಷ ಎಂದರೆ ಭುವನ್ ಒಟ್ಟು 99 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು. ಇನ್ನೊಂದು ದಿನ ಇದ್ದಿದ್ದರೆ ಅವರು ಸೆಂಚುರಿ ಪೂರೈಸುತ್ತಿದ್ದರು.
ಎಲಿಮಿನೇಟ್ ಆಗಿರುವ ಭುವನ್ಗೆ ಬಿಗ್ ಬಾಸ್ ವಿಶೇಷ ಅಧಿಕಾರ ನೀಡಿದ್ದರು. ಮನೆಯ ಸದಸ್ಯರಲ್ಲಿ ಒಬ್ಬರನ್ನು ನೇರವಾಗಿ ಗ್ರ್ಯಾಂಡ್ ಫಿನಾಲೆಗೆ ಆಯ್ಕೆ ಮಾಡುವಂತೆ ಕೇಳಲಾಗಿತ್ತು. ಅದರಂತೆ ಭುವನ್ ನಟ ಮೋಹನ್ ಅವರ ಹೆಸರು ಸೂಚಿಸಿದ್ದಾರಂತೆ, ಇದರಂತೆ ಮೊಹನ್ ಗ್ರಾಂಡ್ ಫಿನಾಲೆಗೆ ಎಂಟ್ರಿ ನೀಡಿದ ಬಿಗ್ ಬಾಸ್ ಮನೆಯ ಮೊದಲ ಸದಸ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.