Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಬಿಕೆ10: ಡ್ರೋಣ್ ಪ್ರತಾಪ್ ಆತ್ಮಹತ್ಯೆಗೆ ಯತ್ನ? ಬಿಗ್ ಬಾಸ್ ಕೊಟ್ಟ ಸ್ಪಷ್ಟನೆ ಏನು?

ಬಿಬಿಕೆ10: ಡ್ರೋಣ್ ಪ್ರತಾಪ್ ಆತ್ಮಹತ್ಯೆಗೆ ಯತ್ನ? ಬಿಗ್ ಬಾಸ್ ಕೊಟ್ಟ ಸ್ಪಷ್ಟನೆ ಏನು?

Krishnaveni K

ಬೆಂಗಳೂರು , ಗುರುವಾರ, 4 ಜನವರಿ 2024 (14:24 IST)
ಬೆಂಗಳೂರು: ಬಿಗ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ಡ್ರೋಣ್ ಪ್ರತಾಪ್ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಸಂಚಲನ ಮೂಡಿಸಿದೆ.

ಡ್ರೋಣ್ ಪ್ರತಾಪ್ ಮನೆಯಲ್ಲಿ ಮಾತ್ರೆ ನುಂಗಿ ಆಸ್ಪತ್ರೆಗೆ ಯತ್ನಿಸಿದ್ದಾರೆ. ಎಲ್ಲರೂ ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂಬ ನೋವಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅಲ್ಲದೆ ಇತ್ತೀಚೆಗೆ ಮನೆಗೆ ಬಂದಿದ್ದ ಗುರೂಜಿ ನೀವು ಕುಟುಂಬದವರಿಂದ ದೂರವಿದ್ದರೇ ಉತ್ತಮ ಎಂದು ಭವಿಷ್ಯ ನುಡಿಯುತ್ತಾರೆ. ಈ ಮಾತೂ ಅವರ ಮನಸ್ಸಿಗೆ ನೋವು ಉಂಟು ಮಾಡಿತ್ತು ಎನ್ನಲಾಗಿದೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಗ್ ಬಾಸ್ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿಲ್ಲ. ಫುಡ್ ಪಾಯಿಸನ್ ಆಗಿದೆ. ಅದಕ್ಕೆ ಅವರನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ. ಪ್ರತಾಪ್ ಪೋಷಕರೂ ನಮಗೆ ಬಿಗ್ ಬಾಸ್ ಕಡೆಯಿಂದ ಫುಡ್ ಪಾಯಿಸನ್ ಆಗಿದೆ ಎಂದು ಮಾಹಿತಿ ಬಂದಿದೆ ಎಂದಿದ್ದಾರೆ.

ಹೀಗಾಗಿ ಯಾರೋ ಬೇಕೆಂದೇ ಈ ರೀತಿ ಸುದ್ದಿ ಹಬ್ಬಿಸಿದ್ದಾರಾ ಅಥವಾ ನಿಜವಾಗಿಯೂ ಘಟನೆ ನಡೆದಿದ್ದರೂ ಬಿಗ್ ಬಾಸ್ ಮುಚ್ಚಿಡುತ್ತಿದೆಯೇ ಎಂದು ಗೊತ್ತಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಧು ಕೋಕಿಲಗೆ ಹಿಗ್ಗಾಮುಗ್ಗಾ ಹೊಡೆದು ಕತ್ತು ಹಿಸುಕಿದ ಉಪೇಂದ್ರ!