ಮುಂಬೈ: ನಿನ್ನೆ ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ತಾಯ್ನಾಡಿಗೆ ಬಂದ ಟೀಂ ಇಂಡಿಯಾ ವೀರರಿಗೆ ಅದ್ಧೂರಿ ಸ್ವಾಗತದ ಬಳಿಕ, ವಿಶ್ವವನ್ನು ಗೆದ್ದ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರಿಗೆ ಮನೆಯ ಸದಸ್ಯರು ಹೂವಿನ ಅಲಂಕಾರ ಮಾಡಿ ಸ್ವಾಗತ ಕೋರಿದರು.
ಸದ್ಯ ಸಾಮಾಜಿಕ ಜಾಲತಾನದಲ್ಲಿ ಈ ಫೋಟೋ ವೈರಲ್ ಆಗಿದೆ. ಫೋಟೋದಲ್ಲಿ ರೋಹಿತ್ ಶರ್ಮಾ ಅವರು ಮನೆಯ ಬಾಗಿಲಿನಲ್ಲಿ ನಿಂತಿರುವುದು ಕಾಣುತ್ತದೆ. ನೆಲಕ್ಕೆ ಹೂವಿನ ದಳಗಳಿಂದ ಶೃಂಗಾರ ಮಾಡಿ ಅವರಿಗೆ ಮನೆಯೊಳಗೆ ಸ್ವಾಗತ ಕೋರಲಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ರೋಹಿತ್ ಶರ್ಮಾ ಅವರು ಈ ಪೋಟೋವನ್ನು ಶೇರ್ ಮಾಡಿ, 'ಹೋಮ್ ಸ್ವೀಟ್ ಹೋಮ್' ಎಂದು ಬರೆದುಕೊಂಡಿದ್ದಾರೆ. ಇನ್ನೂ ವಿಶ್ವಕಪ್ ಗೆಲುವನ್ನು ರೋಹಿತ್ ಶರ್ಮಾ ಅವರು ಇಡೀ ರಾಷ್ಟ್ರಕ್ಕೆ ಅರ್ಪಿಸಿದರು. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ ಇದು ನಿಮಗಾಗಿ ಎಂದು ಬರೆದುಕೊಂಡಿದ್ದರು.
ಗುರುವಾರ ತಾಯ್ನಾಡಿಗೆ ವಿಶ್ವಕಪ್ ಜತೆ ಮರಳಿದ ಟೀಂ ಇಂಡಿಯಾ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತಕೋರಲಾಯಿತು. ನಂತರ ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಟೀಂ ಇಂಡಿಯಾ ಆಟಗಾರರು ಭೇಟಿಯಾಗಿ, ಕೆಲಹೊತ್ತು ಮಾತುಕತೆ ನಡೆಸಿದರು. ನಂತರ ಮುಂಬೈನಲ್ಲಿ ಸಂಜೆ ಮೆನ್ ಇನ್ ಬ್ಲೂ ಮರೈನ್ ಡ್ರೈವ್‌ನಿಂದ ಸಾಂಪ್ರದಾಯಿಕ ವಾಂಖೆಡೆ ಕ್ರೀಡಾಂಗಣದವರೆಗೆ ತೆರೆದ ಬಸ್ ವಿಜಯೋತ್ಸವದ ಮೆರವಣಿಗೆಯನ್ನು ನಡೆಯಿತು.
ಭಾವೋದ್ರಿಕ್ತ ಅಭಿಮಾನಿಗಳ ಹರ್ಷೋದ್ಗಾರ, ಘೋಷಣೆಗಳು ಮತ್ತು ಚಪ್ಪಾಳೆಗಳ ನಡುವೆ ತಂಡವು ವಾಂಖೆಡೆಗೆ ತೆರಳಿತು. ವಾಂಖೆಡೆಯಲ್ಲಿ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪದಾಧಿಕಾರಿಗಳು 125 ಕೋಟಿ ರೂಪಾಯಿ ಬಹುಮಾನ ನೀಡಿ ಗೌರವಿಸಿದರು. ಆಟಗಾರರು ತಮ್ಮ ಗೆಲುವಿನ ಬಗ್ಗೆ ಮಾತನಾಡಿದರು ಮತ್ತು T20 ವಿಶ್ವಕಪ್‌ನಲ್ಲಿನ ಪ್ರಮುಖ ಆಟಗಾರರ ಪ್ರದರ್ಶನಗಳು ಕಿಕ್ಕಿರಿದ ವಾಂಖೆಡೆಯೊಳಗೆ ಮತ್ತು ಅವರ ಹೃದಯವನ್ನು ಹೊರಹಾಕಿದರು. ಈ ಸಂದರ್ಭದಲ್ಲಿ ಆಟಗಾರರು ದೇಶದ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ರಾಗಕ್ಕೆ ವಿಜಯದ ಸುತ್ತು ಹಾಕಿದರು.