ಬೆಂಗಳೂರು: ಗೋಧಿ ಹುಗ್ಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಿಸಿ ಬಿಸಿ ಹುಗ್ಗಿ ತಿನ್ನಲು ಚೆನ್ನಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು
ಗೋಧಿ ನುಚ್ಚು -ಅರ್ಧ ಕಪ್
ಹಾಲು -ಅರ್ಧ ಲೀಟರ್
ನೀರು -ಅರ್ಧ ಲೀಟರ್
ಬೆಲ್ಲ -ಅರ್ಧ ಕಪ್
ಒಣಕೊಬ್ಬರಿತುರಿ- ಕಾಲು ಕಪ್
ಗಸಗಸೆ -ಎರಡು ಚಮಚ
ದ್ರಾಕ್ಷಿ, ಗೋಡಂಬಿ ಸ್ವಲ್ಪ
ಮಾಡುವ ವಿಧಾನ
ಮೊದಲು ಗೋಧಿ ನುಚ್ಚನ್ನು ಚೆನ್ನಾಗಿ ತೊಳೆದು ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಹಾಲು ಮತ್ತು ನೀರು ಹಾಕಿ ಬೇಯಿಸಿಕೊಳ್ಳಬೇಕು. ನಂತರ ಬೆಲ್ಲವನ್ನು ಹಾಕಿ ಸ್ವಲ್ಪ ಕುದಿಸಬೇಕು. ಒಣಕೊಬ್ಬರಿ ತುರಿ, ಹುರಿದು ಪುಡಿ ಮಾಡಿದ ಗಸಗಸೆ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ-ಒಣ ದ್ರಾಕ್ಷಿಯನ್ನು ಹಾಕಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ