Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೋಕಿಯೋ ಒಲಿಂಪಿಕ್ಸ್: ಪದಕ ಗೆಲ್ಲಬಲ್ಲ ಮಹಿಳೆಯರು

ಟೋಕಿಯೋ ಒಲಿಂಪಿಕ್ಸ್: ಪದಕ ಗೆಲ್ಲಬಲ್ಲ ಮಹಿಳೆಯರು
ಟೋಕಿಯೋ , ಶನಿವಾರ, 24 ಜುಲೈ 2021 (10:43 IST)
ಟೋಕಿಯೋ: ಭಾರತಕ್ಕೆ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕದ ಭಾರೀ ನಿರೀಕ್ಷೆಯಿದೆ. ಈ ಬಾರಿ ಪದಕ ಗೆಲ್ಲುವ ನಿರೀಕ್ಷೆಯಿರುವ ಮಹಿಳಾ ಕ್ರೀಡಾಪಟುಗಳು ಯಾರೆಲ್ಲಾ ನೋಡೋಣ.


ಪಿ.ವಿ. ಸಿಂಧು: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕಳೆದ ಬಾರಿ ಬೆಳ್ಳಿ ಗೆದ್ದು ಕೀರ್ತಿ ಪತಾಕೆ ಹಾರಿಸಿದ್ದರು. ಈ ಬಾರಿ ಅದನ್ನು ಚಿನ್ನವಾಗಿ ಪರಿವರ್ತಿಸಬಹುದು ಎಂಬ ನಿರೀಕ್ಷೆಯಿದೆ.

ಮೇರಿ ಕಾಮ್: ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅನೇಕರಿಗೆ ಸ್ಪೂರ್ತಿ. ಎರಡು ಮಕ್ಕಳ ತಾಯಿ ಮೇರಿ ಮೇಲೆ ಅಪಾರ ಭರವಸೆಯಿದೆ.

ಮೀರಾಬಾಯಿ ಚಾನು: 49 ಕೆ.ಜಿ. ವಿಭಾಗದ ವೈಟ್ ಲಿಫ್ಟರ್ ಆಗಿರುವ ಈಕೆ ಮಾಜಿ ವಿಶ್ವ ಚಾಂಪಿಯನ್.  ಈ ವಿಭಾಗದಲ್ಲಿ ಈಕೆಯೇ ಫೇವರಿಟ್.

ವಿನೇಶ್ ಪೋಗಟ್: ಕುಸ್ತಿ ಎಂದರೇ ಪೋಗಟ್ ಮನೆತನದವರು ಫೇಮಸ್. ವಿನೇಶ್ ಪೋಗಟ್ 53 ಕೆ.ಜಿ. ವಿಭಾಗದ ಮಹಿಳೆಯರ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಪದಕ ಗೆಲ್ಲುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೋಕಿಯೊ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡ ಮುನ್ನಡೆಸಿದ ಮೇರಿಕೋಮ್