Webdunia - Bharat's app for daily news and videos

Install App

ಕ್ರೀಡಾಪಟುಗಳ ಸಂಘರ್ಷವನ್ನು ಬೆಳಕಿಗೆ ತನ್ನಿ ಎಂದ ಮೋದಿಗೆ ಸುಶೀಲ್ ಕೃತಜ್ಞತೆ

Webdunia
ಮಂಗಳವಾರ, 6 ಸೆಪ್ಟಂಬರ್ 2016 (17:40 IST)
ಕ್ರೀಡಾಪಟುಗಳ ಎದುರಿಸುತ್ತಿರುವ ಸಮಸ್ಯೆಗಳು, ಅವರ ದೈನಂದಿನ ಸಂಘರ್ಷವನ್ನು ಬೆಳಕಿಗೆ ತನ್ನಿ ಎಂದು ಮಾಧ್ಯಮದವರಿಗೆ ಸಲಹೆ ನೀಡಿದ್ದ ಪ್ರಧಾನಿ ಮೋದಿ ಅವರಿಗೆ ಖ್ಯಾತ ಕುಸ್ತಿ ಪಟು ಸುಶೀಲ್ ಕುಮಾರ್ ಕೃತಜ್ಞತೆ ತಿಳಿಸಿದ್ದಾರೆ. 
 
ಇತ್ತೀಚಿಗೆ ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಜತೆ ಮಾತನ್ನಾಡುತ್ತಿದ್ದ ಪ್ರಧಾನಿ ಮೋದಿ, ರಾಜಕಾರಣಿಗಳ ಹಿಂದೆ ಓಡುವುದರ ಬದಲು ಕ್ರೀಡಾಪಟುಗಳ ಹಿಂದೆ ಓಡಿ. ಅವರ ಪ್ರತಿದಿನದ ಹೋರಾಟವನ್ನು ದೇಶದ ಮುಂದಿಡಿ, ಎಂದು ಮಾಧ್ಯಮದವರಿಗೆ ಕಿವಿ ಮಾತು ಹೇಳಿದ್ದರು. 
 
ತಮ್ಮ ಸಾಧನೆ ಮೂಲಕ ನಮ್ಮ ದೇಶಕ್ಕೆ ಹೆಮ್ಮೆ ತರುವ ಕ್ರೀಡಾಪಟುಗಳು ಪ್ರತಿದಿನ ಅದಕ್ಕಾಗಿ ಬೆವರು ಸುರಿಸುತ್ತಾರೆ. ಇದನ್ನು ಮುಖ್ಯಾಂಶವನ್ನಾಗಿಸಿ. ರಾಜಕಾರಣಿಗಳ ಬೆನ್ನಿಗೆ ಓಡುವ ಬದಲು ಮಾಧ್ಯಮಗಳು ಭಾರತೀಯ ಕ್ರೀಡಾಪಟುಗಳ ಪರಿಶ್ರಮದ ಕಥೆಯನ್ನು ಬೆಳಕಿಗೆ ತರಬೇಕು. ನೀವು ರಿಯೋಗೆ ಹೋಗಿದ್ದ 30 ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಳ್ಳಿ. ಅವರ ದೈನಂದಿನ ವೇಳಾಪಟ್ಟಿ ಏನೆಂಬುದನ್ನು ದೇಶಕ್ಕೆ ತೋರಿಸಿ. ಅವರ ಪರಿಶ್ರಮದ ಕಥೆಯನ್ನು ನೋಡಿಯಾದರೂ ನಮ್ಮ ಕ್ರೀಡಾಪಟುಗಳನ್ನು ನೋಡುವ ದೃಷ್ಟಿಯಲ್ಲಿ ಬದಲಾವಣೆಯಾಗಬಹುದು. ದೇಶವನ್ನು ಪ್ರತಿನಿಧಿಸುವ ಮುನ್ನ ಭಾರತೀಯ ಕ್ರೀಡಾಪಟು 10-12 ವರ್ಷ ಕಠಿಣ ಪರಿಶ್ರಮ, ತರಬೇತಿ ಪಡೆಯುತ್ತಾನೆ. ತಾವು ಯಶಸ್ಸು ಗಳಿಸದಿದ್ದರೂ ಕಠಿಣ ಪರಿಶ್ರಮದ ಜತೆ ರಾಜಿಯಾಗುವುದಿಲ್ಲ ಎಂದು ಪ್ರಧಾನಿ ಹೇಳಿದ್ದರು. 
 
ಮೋದಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಶೀಲ್ ಕುಮಾರ್,  ಕ್ರೀಡಾಪಟುಗಳಿಗಾಗಿ ಇಷ್ಟೊಂದು ಮಹತ್ವದ ಮಾತುಗಳನ್ನಾಡಿರುವ ಮೋದಿ ಅವರಿಗೆ ನನ್ನ ಕೃತಜ್ಞತೆಗಳು. ಈ ಮೊದಲು ಯಾವ ಪ್ರಧಾನಿಯೂ ಈ ಕೆಲಸವನ್ನು ಮಾಡಿರಲಿಲ್ಲ. ಸಂಘರ್ಷಗಳು ಹೈಲೈಟ್ ಆದರೆ ತಮ್ಮನ್ನು ಸಂಪೂರ್ಣ ದೇಶವೇ ಗಮನಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಕ್ರೀಡಾಳುಗಳಿಗೆ ಅದೇ ಪ್ರೋತ್ಸಾಹವಾಗಿ ಬದಲಾಗುತ್ತದೆ. ನಮ್ಮ ದೇಶದ ಜನರು ಪ್ರತಿದಿನ ನಮ್ಮನ್ನು ಗಮನಿಸುತ್ತಿದ್ದಾರೆ, ಕೇವಲ ನಾಲ್ಕು ವರ್ಷಕ್ಕೊಮ್ಮೆಯಲ್ಲ. ನಿರತರವಾಗಿ ಎಂಬ ಅರಿವು ಅವರಿಗಾಗುತ್ತದೆ ಎಂದಿದ್ದಾರೆ. 
 
ರಿಯೋ ಓಲಂಪಿಕ್ಸ್‌ನುದ್ದಕ್ಕೂ ಪ್ರಧಾನಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನದ ಬಗ್ಗೆ ಪ್ರಧಾನಿ ಧನಾತ್ಮಕ ನಿಲುವು, ಆಶಾವಾದವನ್ನು ವ್ಯಕ್ತ ಪಡಿಸುತ್ತಲೇ ಇದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments