ಲಂಡನ್: ಇಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯ ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಗೆ 250 ನೇ ಏಕದಿನ ಪಂದ್ಯ.
ಅದೆಲ್ಲಕ್ಕಿಂತ ಮೊದಲು ಶೊಯೇಬ್ ಗೆ ದೊಡ್ಡ ಬೂಸ್ಟ್ ಸಿಕ್ಕಿದೆ. ಅದು ಸಾನಿಯಾ ಮಿರ್ಜಾ ರೂಪದಲ್ಲಿ. ಹೌದು. ಪತಿಯ ಆಟ ನೋಡಲು ಸ್ವತಃ ಸಾನಿಯಾ ಇಂದು ಮೈದಾನದಲ್ಲಿ ಉಪಸ್ಥಿತರಿರುವ ಸಾಧ್ಯತೆಯಿದೆ.
ಬರ್ಮಿಂಗ್ ಹ್ಯಾಂ ಓಪನ್ ಟೆನಿಸ್ ಟೂರ್ನಿಗಾಗಿ ಇಂಗ್ಲೆಂಡ್ ನಲ್ಲಿರುವ ಸಾನಿಯಾ ಪತಿಗೆ ಗುಡ್ ಲಕ್ ಹೇಳಿದ್ದಾರೆ. ಅಲ್ಲದೆ, ತಮ್ಮಿಬ್ಬರಿಗೂ ಭೇಟಿ ಮಾಡಲು ಅವಕಾಶವೇ ಸಿಗುವುದಿಲ್ಲ. ಈ ಬಾರಿ ತಮ್ಮಿಬ್ಬರ ಟೂರ್ನಿ ಒಂದೇ ದೇಶದಲ್ಲಿ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಆಟದ ಮೇಲಿನ ಶೊಯೇಬ್ ಬದ್ಧತೆಯೇ 250 ನೇ ಏಕದಿನ ಪಂದ್ಯದವರೆಗೆ ತಂದು ನಿಲ್ಲಿಸಿದೆ ಎಂದು ಹೊಗಳಿದ್ದಾರೆ. ಆದರೆ ಭಾರತ ಮತ್ತು ಪಾಕ್ ಪಂದ್ಯವನ್ನು ಸಾನಿಯಾ ವೀಕ್ಷಿಸಿಲ್ಲವಂತೆ. ದ. ಆಪ್ರಿಕಾವನ್ನು ಪಾಕ್ ಸೋಲಿಸಿದ ಪಂದ್ಯವನ್ನು ನೋಡಿದ್ದೇನೆ ಎಂದು ಸಾನಿಯಾ ಹೇಳಿದ್ದಾರೆ.