ಹೈದರಾಬಾದ್: ಲಾಕ್ ಡೌನ್ ವೇಳೆ ಮಹಿಳೆಯರ ಮೇಲಿನ ಗೃಹಹಿಂಸೆ ಹೆಚ್ಚಳವಾಗಿದೆ ಎಂಬ ವರದಿಗಳ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಹಿಳೆಯರನ್ನೂ ಸಮಾನರಾಗಿ ಕಾಣಬೇಕು ಎಂದು ಪ್ರತಿಪಾದಿಸಿದ್ದಾರೆ.
‘ಲಾಕ್ ಡೌನ್ ವೇಳೆ ಮಹಿಳೆಯರ ಮೇಲೆ ಗೃಹ ಹಿಂಸೆ ಹೆಚ್ಚಳವಾಗಿದೆ ಎಂಬ ವರದಿ ನೋಡಿದೆ. ನಿಜಕ್ಕೂ ಇದು ಆಘಾತಕಾರಿ. ಈ ವಿಷಮ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಮಹಿಳೆಯರು ಮತ್ತು ಪುರುಷರನ್ನು ಸಮಾನರಾಗಿ ಕಾಣಬೇಕು. ಇಂತಹ ಘಟನೆಯನ್ನು ನಾನು ಖಂಡಿಸುತ್ತೇನೆ’ ಎಂದು ಸಾನಿಯಾ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಈ ಸಮಯದಲ್ಲಿ ನಮ್ಮಿಂದ ಎಷ್ಟು ಸಾಧ‍್ಯವೋ ಅಷ್ಟು ಬಡವರಿಗೆ, ಸಂಕಷ್ಟಕ್ಕೀಡಾದವರಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.