ನವದೆಹಲಿ: ಒಲಿಂಪಿಕ್ಸ್ ಪದಕ ಗೆದ್ದು ತರಬೇಕೆಂಬ ನನ್ನ ಭರವಸೆಯನ್ನು ನಾನು ಪೂರ್ತಿ ಮಾಡಿ ಕೊಟ್ಟಿದ್ದೇನೆ. ನಿಮ್ಮ ಭರವಸೆ ಯಾವಾಗ ಈಡೇರಿಸುತ್ತೀರಿ? ಹೀಗೆಂದು ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಹರ್ಯಾಣ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕಾರಣ, ಒಲಿಂಪಿಕ್ಸ್ ಪದಕ ಗೆದ್ದಾಗ ತಾನು ತನ್ನ ನಾಡಿನ ಹೆಮ್ಮೆಯ ಪುತ್ರಿಗೆ ದೊಡ್ಡ ಮೊತ್ತದ ಬಹುಮಾನ ಹಣ ಕೊಡುತ್ತೇವೆ ಎಂದು ಘೋಷಿಸಿದ್ದ ರಾಜ್ಯ ಸರ್ಕಾರ ಈಗ ಅದನ್ನು ಮರೆತು ನಡೆದುಕೊಳ್ಳುತ್ತಿದೆ. ಇದು ಸಾಕ್ಷಿ ಅಸಮಾಧಾನಕ್ಕೆ ಕಾರಣವಾಗಿದೆ.
ಹರ್ಯಾಣ ಸರ್ಕಾರ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದರೆ 2.5 ಕೋಟಿ ರೂ. ಬಹುಮಾನ ಮೊತ್ತ ನೀಡುವುದಾಗಿ ಘೋಷಿಸಿತ್ತು. ಆದರೆ ಆರು ತಿಂಗಳು ಕಳೆದರೂ ತನ್ನ ಮಾತಿನಂತೆ ನಡೆದುಕೊಂಡಿಲ್ಲ. ಬಹುಶಃ ಸರ್ಕಾರ ಜಾಣ ಮರೆವು ಪ್ರದರ್ಶಿಸಿರಬೇಕು. ಅದಕ್ಕೇ ಸಾಕ್ಷಿ ನೆನಪಿಸುವ ಕೆಲಸ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.