ರಿಯೋ ಓಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪಿ ವಿ ಸಿಂಧು ಮತ್ತು ಆಕೆಯ ಕೋಚ್ ಪಿ.ಗೋಪಿಚಂದ್ ಅವರಿಗೆ ಮಹಾರಾಷ್ಟ್ರ ಬ್ಯಾಡ್ಮಿಂಟನ್ ಅಸೋಶಿಯೇಷನ್ ಸೆಪ್ಟೆಂಬರ್ 6 ರಂದು ಸನ್ಮಾನವನ್ನು ಹಮ್ಮಿಕೊಂಡಿದೆ.
ರಿಯೋದಿಂದ ಮರಳಿದ ಬಳಿಕ ಇದೇ ಮೊದಲ ಬಾರಿಗೆ ಸಿಂಧು ವಾಣಿಜ್ಯ ರಾಜಧಾನಿಗೆ ಆಗಮಿಸಲಿದ್ದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಮಹಾರಾಷ್ಟ್ರ ಬ್ಯಾಡ್ಮಿಂಟನ್ ಅಸೋಶಿಯೇಷನ್ ಅಧ್ಯಕ್ಷ ಅರುಣ್ ಲಖಾನಿ ಅವರಿಂದ ಸನ್ಮಾನಿತರಾಗಲಿದ್ದಾರೆ.
ಈ ಹಿಂದೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚನ್ನು ಪಡೆದಿದ್ದ ಸಿಂಧು ಓಲಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಬಾರತೀಯ ಮಹಿಳೆ ಎಂಬ ಗೌರವಕ್ಕೆ ಸಹ ಪಾತ್ರರಾಗಿದ್ದಾರೆ. ಎಲ್ಲ ಅಡೆತಡೆಗಳನ್ನು ಮೀರಿ ಫೈನಲ್ ಪ್ರವೇಶಿಸಿ ಅಲ್ಲಿ ಕೂಡ ಅದ್ಭುತ ಪ್ರದರ್ಶನ ನೀಡಿದ್ದ ಸಿಂಧು ದೇಶಕ್ಕೆ ಬೆಳ್ಳಿ ಪದಕವನ್ನು ಗೆದ್ದು ತಂದಿದ್ದರು.
ಬ್ರೆಜಿಲ್‌ನಿಂದ ಮರಳಿದಾಗಿನಿಂದ ಸಿಂಧು ಅವರಿಗೆ ಗೌರವ ನೀಡಲು ನಾವು ಕಾತರಿಸುತ್ತಿದ್ದೇನೆ. ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಕ್ಕೆ ಅವರಿಗೆ ಅಭಿನಂದನೆಗಳು ಎಂದು ಲಖಾನಿ ತಿಳಿಸಿದ್ದಾರೆ.