ಟೋಕಿಯೋ: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ಕೃಷ್ಟ ಪ್ರದರ್ಶನ ಮುಂದುವರಿದಿದೆ. ನಿನ್ನೆ ಮತ್ತೆ ಮೂರು ಪದಕ ಗೆದ್ದಿರುವ ಭಾರತ ಇಂದೂ ಕೂಡಾ ಅದೇ ಪ್ರದರ್ಶನ ಮುಂದುವರಿಸಿದೆ. ಶೂಟಿಂಗ್ ನಲ್ಲಿ ಮನೀಶ್ ನರಾವಲ್ ಚಿನ್ನ ಗೆದ್ದಿದ್ದಾರೆ. ಸಿಂಘರಾಜ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ನಿನ್ನೆ ಅವನಿ ಲೇಖಾರ ಮತ್ತೊಂದು ಪದಕ ಗೆಲ್ಲುವ ಮೂಲಕ ಒಂದೇ ಕೂಟದಲ್ಲಿ ಎರಡು ಪದಕ ಗೆದ್ದ ಅಭೂತಪೂರ್ವ ದಾಖಲೆ ಮಾಡಿದರು. ಮೊನ್ನೆಯಷ್ಟೇ ಚಿನ್ನ ಪದಕ ಗೆದ್ದಿದ್ದ ಅವನಿ ನಿನ್ನೆ 50 ಮೀ. ಎಸ್ಎಚ್ 1 ವಿಭಾಗದಲ್ಲಿ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದರು.
ಇದಲ್ಲದೆ ಬಿಲ್ಗಾರಿಕೆ ವಿಭಾಗದಲ್ಲಿ ಹರ್ವಿಂದರ್ ಸಿಂಗ್ ಕಂಚಿನ ಪದಕ, ಹೈಜಂಪ್ ನಲ್ಲಿ ಪ್ರವೀಣ್ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಭಾರತದ ಪದಕ 13 ಕ್ಕೇರಿತ್ತು.
ಇದರಿಂದಿದ ಭಾರತದ ಪದಕ ಸಂಖ್ಯೆ 15 ಕ್ಕೇರಿದೆ. ಇದೀಗ ವಿಶ್ವ ನಂ.1 ಪ್ರಮೋದ್ ಭಗತ್ ಫೈನಲ್ ಗೇರಿದ್ದು, ಮತ್ತೊಂದು ಪದಕ ಖಾತ್ರಿಪಡಿಸಿದ್ದಾರೆ. ಇನ್ನೊಬ್ಬ ಬ್ಯಾಡ್ಮಿಂಟನ್ ತಾರೆ ಮನೋಜ್ ಸರ್ಕಾರ್ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.