Webdunia - Bharat's app for daily news and videos

Install App

ಪಿ.ವಿ. ಸಿಂಧು-ಯಮಗುಚಿ 56 ನಿಮಿಷಗಳ ಕದನ! ಸಿಂಧು ಗೆದ್ದಿದ್ದು ಇದೇ ಕಾರಣಕ್ಕೆ!

Webdunia
ಶುಕ್ರವಾರ, 30 ಜುಲೈ 2021 (15:11 IST)
ಟೋಕಿಯೋ: ಇಬ್ಬರು ಮದಗಜಗಳ ಹೋರಾಟವೆಂದರೆ ಸುಮ್ನೇನಾ? ಕ್ರೀಡಾ ಲೋಕದಲ್ಲೂ ಇಂತಹ ಸಮಬಲರ ಹೋರಾಟದ ಕೌತುಕಕ್ಕೆ ಅನೇಕ ಬಾರಿ ಸಾಕ್ಷಿಯಾಗಿದ್ದೇವೆ. ಇದೀಗ ಪಿ.ವಿ. ಸಿಂಧು-ಯಮಗುಚಿ ನಡುವಿನ ಕಾದಾಟದಲ್ಲೂ ಅಷ್ಟೇ ರೋಚಕತೆ ಇತ್ತು.


ಮೊದಲಿನ ಸೆಟ್ ನಲ್ಲಿ ಇಬ್ಬರೂ ಅಂಕ ಪಡೆಯಲು ಹೋರಾಟ ನಡೆಸಿದರೂ ಸಿಂಧು ತಮ್ಮ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿ ಮೇಲುಗೈ ಸಾಧಿಸಿದರು. ಆದರೆ ಎರಡನೇ ಸೆಟ್ ಅಷ್ಟು ಸುಲಭದ್ದಾಗಿರಲಿಲ್ಲ. ಅದರಲ್ಲೂ ಸ್ಕೋರ್ 10 ರ ಮೇಲೆ ತಲುಪಿದ ಮೇಲೆ ಇಬ್ಬರೂ ಜಿದ್ದಿಗೆ ಬಿದ್ದವರಂತೆ ಆಡಿದರು.

ಆದರೆ ನಡು ನಡುವೆ ಯಮಗುಚಿ ಒತ್ತಡ ನಿಭಾಯಿಸಲು ಸೋತಿದ್ದು ಸ್ಪಷ್ಟವಾಗಿತ್ತು. ಆಕೆ ಈ ಒತ್ತಡ ನಿಭಾಯಿಸಲಾಗದೇ ಕೆಲವೊಂದು ತಪ್ಪು ಮಾಡಿದರೆ ಸಿಂಧು ಒತ್ತಡವನ್ನು ಕೂಲ್ ಆಗಿ ಕೊನೆಯವರೆಗೂ ನಿಭಾಯಿಸಿದ್ದೇ ಆಕೆಯ ಗೆಲುವಿಗೆ ಕಾರಣವಾಯಿತು.

ಈ ಬಾರಿ ಒಲಿಂಪಿಕ್ಸ್ ಗಾಗಿ ಸಿಂಧು ಭರ್ಜರಿ ತಯಾರಿಯನ್ನೇ ಮಾಡಿದ್ದರು. ಲಂಡನ್ ಗೆ ತೆರಳಿ ವಿಶೇಷವಾಗಿ ಮಾನಸಿಕವಾಗಿ ಫಿಟ್ ಆಗಿರಲು ತರಬೇತಿ ಪಡೆದಿದ್ದರು. ಅದೆಲ್ಲದರ ಫಲ ಅವರಿಗೆ ಇಂದಿನ ಪಂದ್ಯದಲ್ಲಿ ಕೈ ಹಿಡಿಯಿತು. ಸಿಂಧು ಇಂದು ಆಡಿದ ರೀತಿ ಆಕೆ 2019 ರಲ್ಲಿ ವಿಶ್ವ ಚಾಂಪಿಯನ್ ಶಿಪ್ ಚಿನ್ನದ ಪದಕ ಗೆಲ್ಲುವಾಗ ಇದ್ದ ಅದೇ  ಛಾಯೆ ಕಂಡುಬಂತು. ಇದೇ ಫಾರ್ಮ್ ಮುಂದುವರಿಸಿದರೆ ಆಕೆ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಅಥವಾ ಚಿನ್ನದ ಪದಕ ಗೆಲ್ಲುವುದನ್ನು ಯಾರಿಂದಲೂ ತಪ್ಪಿಸಲಾಗದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments