ನವದೆಹಲಿ: ಭಾರತದ ಹೆಮ್ಮೆಯ ಜ್ವಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದುಕೊಟ್ಟ ಜ್ವಾವೆಲಿನ್ ನ್ನು ದಾನವಾಗಿ ನೀಡಿದ್ದಾರೆ.
ಜ್ವಾವೆಲಿನ್ ಥ್ರೋನಲ್ಲಿ ಒಲಿಂಪಿಕ್, ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ ನೀರಜ್ ಚೋಪ್ರಾ ಈಗ ಒಂದು ಒಳ್ಳೆಯ ಉದ್ದೇಶಕ್ಕಾಗಿ ದಾನ ಮಾಡಿದ್ದಾರೆ.
ಒಲಿಂಪಿಕ್ ಮ್ಯೂಸಿಯಂಗೆ ತಮ್ಮ ಈಟಿಯನ್ನು ದಾನ ಮಾಡಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಈ ಹಿಂದೆ ಭಾರತದ ಶೂಟರ್ ಅಭಿನವ್ ಬಿಂದ್ರಾ ತಾವು ಚಿನ್ನದ ಪದಕ ಗೆದ್ದಿದ್ದ ರೈಫಲ್ ನ್ನು ಇದೇ ವಸ್ತುಸಂಗ್ರಹಾಲಯಕ್ಕೆ ದಾನ ಮಾಡಿದ್ದರು. ಇದೀಗ ನೀರಜ್ ಸರದಿ.