Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರೊ ಕಬಡ್ಡಿ ಕದನಕ್ಕೆ ಮುಹೂರ್ತ ಫಿಕ್ಸ್‌: ಹೊಸ ಹುರುಪಿನಲ್ಲಿ ಬೆಂಗಳೂರು ಗೂಳಿಗಳು

Pro Kabaddi League

Sampriya

ಬೆಂಗಳೂರು , ಬುಧವಾರ, 4 ಸೆಪ್ಟಂಬರ್ 2024 (14:33 IST)
Photo Courtesy X
ಬೆಂಗಳೂರು: ಪ್ರೊ ಕಬಡ್ಡಿ ಲೀಗ್​ನ 11ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 18 ರಿಂದ 11ನೇ ಆವೃತ್ತಿಯ ಕಬಡ್ಡಿ ಕದನ ಶುರುವಾಗಲಿದೆ. ಈ ಬಾರಿ ಕೂಡ ಒಟ್ಟು 12 ತಂಡಗಳು ಪೈಪೋಟಿ ನಡೆಸಲಿವೆ. ಮೊದಲ ಪಂದ್ಯಕ್ಕೆ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದ ಆತಿಥ್ಯವಹಿಸಲಿದೆ.

ಈ ಆವೃತ್ತಿಯಲ್ಲಿ ಮೂರು ಹಂತಗಳಲ್ಲಿ ಪಂದ್ಯಗಳು ನಡೆಯಲಿದೆ. ಮೊದಲ ಹಂತವು ಅಕ್ಟೋಬರ್ 18 ರಿಂದ ಶುರುವಾಗಲಿದೆ. ಇನ್ನು ದ್ವಿತೀಯ ಹಂತದ ಪಂದ್ಯಗಳು ನವೆಂಬರ್ 10 ರಿಂದ ಪ್ರಾರಂಭವಾಗಲಿದ್ದು, ತೃತೀಯ ಹಂತದ ಮ್ಯಾಚ್​ಗಳು ಡಿಸೆಂಬರ್ 3 ರಿಂದ ಶುರುವಾಗಲಿದೆ. ಈ ಮೂರು ಹಂತದ ಪಂಧ್ಯಗಳು ಹೈದರಾಬಾದ್, ಪುಣೆ ಹಾಗೂ ನೋಯ್ಡಾದಲ್ಲಿ ನಡೆಯಲಿದೆ.

ಮೂರು ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಮೊದಲ ಸುತ್ತಿನ ಪಂದ್ಯಗಳು ಹೈದರಾಬಾದ್​ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದರೆ, ದ್ವಿತೀಯ ಸುತ್ತಿನ ಪಂದ್ಯಗಳಿಗೆ ನೋಯ್ಡಾ ಒಳಾಂಗಣ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಇನ್ನು ಮೂರನೇ ಹಂತದ ಪಂದ್ಯಗಳು ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದರೆ ಈ ಬಾರಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಬುಲ್ಸ್ ತಂಡದ ಯಾವುದೇ ಪಂದ್ಯಗಳಿರುವುದಿಲ್ಲ.

 ಕಳೆದ ಸೀಸನ್ ಪ್ರೊ ಕಬಡ್ಡಿ ಲೀಗ್ ಅನ್ನು 12 ನಗರಗಳಲ್ಲಿ ಆಯೋಜಿಸಲಾಗಿತ್ತು. ಎಲ್ಲಾ ಫ್ರಾಂಚೈಸಿಗಳು ತಮ್ಮ ತವರು ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಿದ್ದರು. ಆದರೆ ಈ ಬಾರಿ ಮೂರು ನಗರಗಳಲ್ಲಿ ಮಾತ್ರ ಟೂರ್ನಿಯನ್ನು ಆಯೋಜಿಸಲು ಪ್ರೊ ಕಬಡ್ಡಿ ಆಯೋಜಕರು ನಿರ್ಧರಿಸಿದ್ದಾರೆ. ಹೀಗಾಗಿ ತವರಿನಲ್ಲಿ ಬೆಂಗಳೂರು ಬುಲ್ಸ್ ತಂಡದ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಅಭಿಮಾನಿಗಳಿರುವುದಿಲ್ಲ.

ಬೆಂಗಳೂರು ಬುಲ್ಸ್ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಪ್ರೊ ಕಬಡ್ಡಿ ಲೀಗ್ ಸೀಸನ್ 6 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಬುಲ್ಸ್​ ಪಡೆಗೆ ಮತ್ತೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಈ ಬಾರಿ ಹೊಸ ತಂಡದೊಂದಿಗೆ ಕಣಕ್ಕೆ ಇಳಿಯಲು ಸಜ್ಜಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಬರ್ ಅಜಮ್ ಗೆ ನೀವಾದ್ರೂ ಸಪೋರ್ಟ್ ಮಾಡಿ ಎಂದು ಕೊಹ್ಲಿಗೆ ದುಂಬಾಲು ಬಿದ್ದ ಪಾಕಿಸ್ತಾನ ಫ್ಯಾನ್ಸ್