ಟೋಕಿಯೋ: ಮಹಿಳೆಯರ ಬಾಕ್ಸಿಂಗ್ ನಲ್ಲಿನಲ್ಲಿ ಗೆಲುವಿನ ಶುಭಾರಂಭ ಮಾಡಿ ಭಾರತಕ್ಕೆ ಭರವಸೆ ಮೂಡಿಸಿರುವ ಬಾಕ್ಸರ್ ಮೇರಿ ಕೋಮ್ ಈಗ ಪ್ರಿ-ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆಯಿಟ್ಟಿದ್ದಾರೆ.
38 ವರ್ಷದ ಮೇರಿ ಕೋಮ್ ವಯಸ್ಸು ತಮಗೆ ಲೆಕ್ಕಕ್ಕೇ ಇಲ್ಲವೇನೋ ಎಂಬಂತೆ ಆಡಿ ಗೆಲುವು ಸಾಧಿಸಿದ್ದರು. ಇದೀಗ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಮೇರಿಗೆ ಕಠಿಣ ಎದುರಾಳಿಯನ್ನು ಎದುರಿಸಬೇಕಾಗಿದೆ.
ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ ಕೋಮ್ ಜುಲೈ 29 ರಂದು ಕ್ವಾರ್ಟರ್ ಫೈನಲ್ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಕೊಲಂಬಿಯಾದ ವೆಲೆನ್ಷಿಯಾ ವಿಕ್ಟೋರಿಯಾ ವಿರುದ್ಧ ಸೆಣಸಬೇಕಿದೆ. ಈ ಕಠಿಣ ಎದುರಾಳಿಯನ್ನು ಮೇರಿ ಹೇಗೆ ಎದುರಿಸಲಿದ್ದಾರೆ ಎಂಬ ಕುತೂಹಲ ಕಾದಿದೆ.