ನವದೆಹಲಿ: ದೆಹಲಿಯ ಥ್ರೋ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದ ಕರ್ನಾಟಕದ ವಾಲಿಬಾಲ್ ತಂಡದ ಮೇಲೆ ಹಲ್ಲೆ ನಡೆಸಿದ ಆರೋಪ ವರದಿಯಾಗಿದೆ. ಅದೂ ದೆಹಲಿ ಆಟಗಾರ್ತಿಯರು ಹಲ್ಲೆ ನಡೆಸಿದ್ದಾರೆ ಎಂದು ಕರ್ನಾಟಕದ ಆಟಗಾರ್ತಿಯರು ಆರೋಪ ಮಾಡಿದ್ದಾರೆ.
ಪಂದ್ಯದ ವೇಳೆ ನಡೆದ ಅನ್ಯಾಯದ ವಿರುದ್ಧ ತಿರುಗಿ ಬಿದ್ದ ಕರ್ನಾಟಕದ ಆಟಗಾರ್ತಿಯರ ಮೇಲೆ ದೆಹಲಿ ತಂಡದ ಆಟಗಾರರು ಹಲ್ಲೆ ನಡೆಸಿದ್ದಾರೆ. ಮ್ಯಾಚ್ ರೆಫರಿ ಕೂಡಾ ದೆಹಲಿ ಪರ ನಿಂತಿದ್ದು ಕರ್ನಾಟಕದವರ ಆಕ್ರೋಶಕ್ಕೆ ಕಾರಣವಾಗಿದೆ.
ಇದಕ್ಕೆ ಮೊದಲು ತಮಿಳುನಾಡು ತಂಡದ ವಿರುದ್ಧವೂ ದೆಹಲಿ ಆಟಗಾರರು ಇದೇ ರೀತಿ ಮಾಡಿದ್ದಾರೆಂದು ಕರ್ನಾಟಕ ತಂಡ ಆರೋಪಿಸಿದೆ. ತಪ್ಪು ನಿರ್ಣಯಗಳನ್ನು ನೀಡಿ ನಮ್ಮನ್ನು ರೆಫ್ರಿಯೇ ವಂಚಿಸಿದರು. ಇದನ್ನು ಪ್ರಶ್ನಿಸಿದ್ದಕ್ಕೆ ನಮಗೆ ನ್ಯಾಯ ನೀಡುವ ಬದಲು ದೆಹಲಿ ಆಟಗಾರರಿಂದು ಹಲ್ಲೆ ನಡೆಸಲಾಗಿದೆ ಎಂದು ಕರ್ನಾಟಕ ತಂಡ ಆರೋಪಿಸಿದೆ.
ಆದರೆ ಗಲಾಟೆಯಲ್ಲಿ ನಮ್ಮ ತಂಡದವರಿಗಿಂತ ತಮಿಳುನಾಡು ಆಟಗಾರರಿಗೆ ಹೆಚ್ಚು ಪೆಟ್ಟಾಗಿದೆ ಎಂದು ಕರ್ನಾಟಕ ತಂಡ ಹೇಳಿಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ