ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಎ ಗುಂಪಿನ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ಸ್ಪೈನ್ ವಿರುದ್ಧ 3-0 ಅಂತರದ ಭರ್ಜರಿ ಗೆಲುವು ಸಂಪಾದಿಸಿದೆ.
ಸಿಮ್ರಾನ್ ಜೀತ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ಅವರು ಹೊಡೆದ ಗೋಲುಗಳ ಪರಿಣಾಮ ಭಾರತಕ್ಕೆ ಈ ಗೆಲುವು ಸಿಕ್ಕಿದೆ.
ಕಳೆದ ಎರಡು ಪಂದ್ಯಗಳ ಪೈಕಿ ಭಾರತ ನ್ಯೂಜಿಲೆಂಡ್ ವಿರುದ್ಧ ಗೆದ್ದು, ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿತ್ತು. ಇದೀಗ ಮತ್ತೆ ಗೆಲುವು ಸಂಪಾದಿಸಿರುವುದರಿಂದ ಪದಕದ ಆಸೆ ಜೀವಂತವಾಗಿದೆ.