ಟೋಕಿಯೋ: ಪುರುಷರ ಹಾಕಿ ಪಂದ್ಯದಲ್ಲಿ ಭಾರತ ತಂಡ ಕ್ವಾರ್ಟರ್ ಫೈನಲ್ ಹಂತಕ್ಕೇರಿದೆ. ಇಂದು ನಡೆದ ಪಂದ್ಯದಲ್ಲಿ ಅರ್ಜೈಂಟೀನಾ ತಂಡವನ್ನು 3-1 ಅಂತರದಿಂದ ಸೋಲಿಸಿದೆ.
ಇದು ಭಾರತ ತಂಡದ ಪಾಲಿಗೆ ದೊಡ್ಡ ಗೆಲುವಾಗಿದೆ. ಹಾಲಿ ಚಾಂಪಿಯನ್ ಆಗಿರುವ ಅರ್ಜೈಂಟಿನಾ ತಂಡವನ್ನು ಸೋಲಿಸುವುದು ಸುಲಭದ ಮಾತಾಗಿರಲಿಲ್ಲ. ಇದೀಗ ಒಟ್ಟು ಮೂರು ಗೆಲುವು ಒಂದು ಸೋಲಿನೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.
ಮುಂದಿನ ಪೂಲ್ ಹಂತದ ಪಂದ್ಯದಲ್ಲಿ ಭಾರತ ಅತಿಥೇಯ ಜಪಾನ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ನಾಳೆ ನಡೆಯಲಿದೆ.