ನವದೆಹಲಿ: ಇದು ಭಾರತೀಯ ಕ್ರೀಡಾಳುವೊಬ್ಬರ ದುಃಸ್ಥಿತಿ. ಸರ್ಕಾರದಿಂದ ಪಡೆಯಬೇಕಾದ ಹಣ ಬಾರದೇ ಪ್ಯಾರಾ ಒಲಿಂಪಿಕ್ಸ್ ಸ್ವಿಮ್ಮರ್ ಕಾಂಚನಮಾಲಾ ಪಾಂಡೆ ಎಂಬಾಕೆ ಬರ್ಲಿನ್ ನಲ್ಲಿ ಭಿಕ್ಷೆ ಬೇಡುವ ಹಂತಕ್ಕೆ ತಲುಪಿದ್ದಾರೆ.
ಪ್ಯಾರಾ ಒಲಿಂಪಿಕ್ಸ್ ಸಮಿತಿಯ ನಿರ್ಲಕ್ಷ್ಯದಿಂದಾಗಿ ಸರಿಯಾದ ಸಮಯಕ್ಕೆ ಹಣ ತಲುಪದೇ ಈ ಅಥ್ಲಿಟ್ ಭಿಕ್ಷೆ ಬೇಡಬೇಕಾಗಿ ಬಂದಿದೆ. ಈ ಬಗ್ಗೆ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಕ್ರೀಡಾ ಇಲಾಖೆಯ ಗಮನಕ್ಕೆ ತಂದಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ.
ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿರುವ ಕ್ರೀಡಾ ಸಚಿವ ವಿಜಯ್ ಗೊಯೆಲ್, ಘಟನೆ ಬಗ್ಗೆ ವಿವರಣೆ ಪಡೆದು ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ. ಸ್ವಿಮ್ಮಿಂಗ್ ಸ್ಪರ್ಧೆಗೆ ತೆರಳಲು ಸುಮಾರು 5 ಲಕ್ಷ ಸಾಲ ಮಾಡಿದ್ದ ಕಾಂಚನಮಾಲ ಸಾಲ ತೀರಿಸಲಾಗದೇ ಈ ದುಃಸ್ಥಿತಿಗೆ ಇಳಿದಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ