Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಏಷ್ಯನ್ ಗೇಮ್ಸ್: 100 ನೇ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತ

ಏಷ್ಯನ್ ಗೇಮ್ಸ್: 100 ನೇ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತ
ಹ್ಯಾಂಗ್ ಝೂ , ಶನಿವಾರ, 7 ಅಕ್ಟೋಬರ್ 2023 (08:30 IST)
Photo Courtesy: Twitter
ಹ್ಯಾಂಗ್ ಝೂ: ಈ ಏಷ್ಯನ್ ಗೇಮ್ಸ್ ನಲ್ಲಿ 100 ಪದಕಗಳ ಗುರಿ ದಾಟುವ ಭರವಸೆಯೊಂದಿಗೆ ಚೀನಾಗೆ ಕಾಲಿಟ್ಟಿದ್ದ ಭಾರತೀಯ ಕ್ರೀಡಾಳುಗಳು ಕನಸು ನನಸಾಗಿಸಿದ್ದಾರೆ. ಭಾರತ ಈಗ 100 ನೇ ಪದಕವನ್ನು ಗೆದ್ದುಕೊಂಡಿದೆ.

ಇಂದು ಮಹಿಳಾ ಕಬಡ್ಡಿ ತಂಡ ಚೈನೀಸ್ ತೈಪೆ ವಿರುದ್ಧ ಫೈನಲ್ ನಲ್ಲಿ 26-24 ಅಂಕಗಳೊಂದಿಗೆ ಗೆದ್ದು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.  ಇದು ಭಾರತದ ಪಾಲಿಗೆ ಈ ಏಷ್ಯನ್ ಗೇಮ್ಸ್ ನಲ್ಲಿ 25 ನೇ ಪದಕವಾಗಿದೆ.

ಇಂದು ಪುರುಷರ ಕ್ರಿಕೆಟ್ ನಲ್ಲೂ ಭಾರತ ಬಂಗಾರ ಗೆಲ್ಲುವ ನಿರೀಕ್ಷೆಯಿದೆ. ಪುರುಷರ ಕಬಡ್ಡಿಯಲ್ಲೂ ಭಾರತ ಫೈನಲ್ ಗೇರಿದೆ. ಅಲ್ಲದೆ ಕೆಲವು ಕುಸ್ತಿ ಪಂದ್ಯಗಳು ಬಾಕಿಯಿವೆ. ಹೀಗಾಗಿ ಮತ್ತಷ್ಟು ಪದಕದ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯನ್ ಗೇಮ್ಸ್ ಕ್ರಿಕೆಟ್: ಚಿನ್ನ ಗೆಲ್ಲಲು ಹೊರಟ ಟೀಂ ಇಂಡಿಯಾ