ಟೊಕಿಯೊ ಒಲಿಂಪಿಕ್ಸ್ ನಲ್ಲಿ 6ನೇ ಸ್ಥಾನ ಪಡೆದಿದ್ದ ಭಾರತದ ಮಹಿಳಾ ಡಿಸ್ಕಸ್ ಪಟು ಕಮಲ್ ಪ್ರೀತ್ ಕೌರ್ ನಿಷೇಧಿತ ಡ್ರಗ್ಸ್ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ನಿಷೇಧಿಸಲಾಗಿದೆ.
ಕಮಲ್ ಪ್ರೀತ್ ಕೌರ್ ನಿಷೇಧಿತ ಔಷಧ ಸೇವನೆ ಮಾಡಿದ್ದರಿಂದ ಈಗಾಗಲೇ ಅಮಾನತು ಮಾಡಲಾಗಿದೆ. ಇದೀಗ ಬಿ ವರದಿಯೂ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗರಿಷ್ಠ 4 ವರ್ಷಗಳ ನಿಷೇಧಕ್ಕೆ ಗುರಿಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ.
26 ವರ್ಷದ ಪಂಜಾಬಿ ಅಥ್ಲೀಟ್ ಆಗಿರುವ ಕಮಲ್ ಪ್ರೀತ್ ಕೌರ್ ದೇಶದ ಎ ದರ್ಜೆಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದು, ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಇದೀಗ ನಿಷೇಧಿತ ಮದ್ದು ಸೇವಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ ನೋಟಿಸ್ ಜಾರಿ ಮಾಡಿದೆ.