ರಿಯೋ ಓಲಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ತಂದುಕೊಟ್ಟಿರುವ ಪಿ.ವಿ.ಸಿಂಧು ಮತ್ತು ಸಾಕ್ಷಿ ಮಲಿಕ್ ಅವರನ್ನು ಮನಸಾರೆ ಹೊಗಳಿದ ಪ್ರಧಾನಿ ನರೇಂದ್ರ ಮೋದಿ ಈ ಪುತ್ರಿಯರು ದೇಶದ ಮರ್ಯಾದೆಯನ್ನು ಉಳಿಸಿದರು ಎಂದು ಹೇಳಿದ್ದಾರೆ.
ಗುಜರಾತ್‌ನ ಜಾಮ್ ನಗರದಲ್ಲಿ ಶೌನಿ ನೀರಾವರಿ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಲಿಂಗ ತಾರತಮ್ಯ ಸೇರಿದಂತೆ ದೇಶ ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.
ನಮ್ಮ ಪುತ್ರಿಯರು ಮತ್ತು ಸಹೋದರಿಯರು ಬಯಲು ಮಲವಿಜರ್ಸನೆಗೆ ಹೋಗದಿರುವುದಕ್ಕೆ ನಾವು ಸೂಕ್ತ ವ್ಯವಸ್ಥೆ ಮಾಡಬೇಕಿದೆ. ರಿಯೋ ಓಲಂಪಿಕ್ಸ್‌ನಲ್ಲಿ ನಮ್ಮ ಪುತ್ರಿಯರು ದೇಶದ ಮಾನವನ್ನು ಉಳಿಸಿ ಗೌರವವನ್ನು ತಂದಿದ್ದನ್ನು ನೀವು ನೋಡಿರುತ್ತೀರಿ. ಇದು ನಮ್ಮ ಪುತ್ರಿಯರ ನಿಜವಾದ ಶಕ್ತಿ ಎಂದು ಮೋದಿ ಅವರು ಹೇಳುತ್ತಿದ್ದಂತೆ ನೆರೆದ ಜನರು ಚೀರಾಡುತ್ತ ಅವರಿಗೆ ಸಾಥ್ ನೀಡಿದರು.
ಗುಜರಾತ್ ಸರ್ಕಾರ ಹಲವು ವರ್ಷಗಳಿಂದ ಬೇಟಿ ಬಟಾವೋ ಆಂದೋಲನದಲ್ಲಿ ತೊಡಗಿಸಿಕೊಂಡಿದೆ ಎಂದ ಅವರು ಹುಡುಗರು ಮತ್ತು ಹುಡುಗಿಯರು ನಡುವೆ ಭೇದಭಾವ ಮಾಡದಿರಿ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಪೋಷಕರಲ್ಲಿ ಮತ್ತು ಸಮಾಜಕ್ಕೆ ಮನವಿ ಮಾಡಿಕೊಂಡರು.
ನಿಮ್ಮ ತಪ್ಪನ್ನು ಮರುಕಳಿಸದಿರಿ. ನಮ್ಮ ಪುತ್ರಿಯರು ಪುತ್ರರಂತೆ ಸಮರ್ಥರು ಎಂದುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ರಿಯೋ ಓಲಂಪಿಕ್ಸ್‌ನಲ್ಲಿ ಕೂಡ ಇದು ಸಾಬೀತಾಗಿದೆ. ಅವರ ನಡುವೆ ಪಕ್ಷಪಾತ ಮಾಡದಿರಿ ಎಂದು ಮೋದಿ ಕೇಳಿಕೊಂಡರು.
ರಿಯೋ ಓಲಂಪಿಕ್ಸ್‌ನಲ್ಲಿ ಹುಡುಗಿಯರ ಪ್ರದರ್ಶನವನ್ನು ಕಂಡ ಬಳಿಕ ಜನರು 'ಬೇಟಿ ಬಚಾವೋ, ಬೇಟಿ ಪಡಾವೋ, ಬೇಟಿ ಖಿಲಾವೋ' ಎನ್ನತೊಡಗಿದ್ದಾರೆ. ನಾವೆಲ್ಲರೂ ಸೇರಿ ಪುತ್ರಿಯರಿಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೋತ್ಸಾಹ ನೀಡೋಣ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ