ಫ್ರಾನ್ಸ್: ಬಿಸಿ ರಕ್ತದ ಯುವಕರಿಗೇ ಇದು ಸುಲಭದ ಕೆಲಸವಲ್ಲ. ಅಂತಹದ್ದರಲ್ಲಿ ಫ್ರಾನ್ಸ್ ನ ಈ ಶತಾಯುಷಿ ತಾತ ಆ ಸಾಧನೆ ಮಾಡಿದ್ದಾರೆ. ಏನಿದು ಸಾಧನೆ ನೋಡೋಣ.
ಈ ಧೀರ ತಾತನ ಹೆಸರು ರಾಬರ್ಟ್. ಇವರು 105 ಪ್ಲಸ್ ವಿಭಾಗದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಒಂದು ಗಂಟೆಯಲ್ಲಿ 22.547 ಕಿ.ಮೀ. ದೂರ ಸೈಕಲ್ ಓಡಿಸಿ ವಿಶ್ವ ದಾಖಲೆ ಮಾಡಿದ್ದಾರೆ. 92 ಲ್ಯಾಪ್ಸ್ ಗಳನ್ನು ಯಶಸ್ವಿಯಾಗಿ ಹಿಂದಿಕ್ಕಿದ ರಾಬರ್ಟ್ ನನಗೊಬ್ಬ ಪ್ರತಿಸ್ಪರ್ಧಿ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಎನ್ನುತ್ತಿದ್ದಾರೆ.
ಅಂದ ಹಾಗೆ ರಾಬರ್ಟ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲೇನಲ್ಲ. ಮೂರು ವರ್ಷದ ಹಿಂದೆಯೂ 100 ಪ್ಲಸ್ ವಿಭಾಗದಲ್ಲಿ ಭಾಗವಹಿಸಿ ಗಂಟೆಗೆ 26 ಕಿ.ಮೀ. ದೂರ ಕ್ರಮಿಸಿ ದಾಖಲೆ ಮಾಡಿದ್ದರು. ಈ ತಾತಪ್ಪನ ಉತ್ಸಾಹ ನೋಡಿದರೆ ಎಂತಹಾ ತರುಣರೂ ನಾಚಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ