ಚಾಂಪಿಯನ್ಸ್ ಟ್ರೋಫಿ, ಕ್ರಿಕೆಟ್, ಟೀಮ್ ಇಂಡಿಯಾ, cricket, champions trophy, team india
ಜಾಗತಿಕ ಟೂರ್ನಿಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ತಮಗೆ ಸರಿಸಾಟಿಯೇ ಅಲ್ಲ ಎಂಬುದನ್ನ ಟೀಮ್ ಇಂಡಿಯಾ ಮತ್ತೆ ಸಾಬೀತುಪಡಿಸಿದೆ. ನಿನ್ನೆ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ 124 ರನ್`ಗಳ ಅಂತರದಿಂದ ಬಗ್ಗು ಬಡಿಯುವ ಮೂಲಕ ಪಾಕಿಗಳ ಸೊಕ್ಕಡಗಿಸಿದೆ. ಈ ಪಂದ್ಯದಲ್ಲಿ ಕೆಲ ವಿಷಯಗಳು ಅತ್ಯಂತ ಅಭಿಮಾನಿಗಳ ಗಮನ ಸೆಳೆದಿವೆ. ಅವುಗಳಲ್ಲಿ ಟಾಪ್ 5 ಇಲ್ಲಿವೆ.
1. ಅಭ್ಯಾಸ ಪಂದ್ಯ ಆಡಡಿದ್ದರೂ ಪಾಕ್ ವಿರುದ್ಧ ಸಿಡಿದ ರೋಹಿತ್: ವೈಯಕ್ತಿಕ ಕೆಲಸಗಳಿಂದಾಗಿ ಮೊದಲ ಅಭ್ಯಾಸ ಪಂದ್ಯ ಮಿಸ್ ಮಾಡಿಕೊಂಡಿದ್ದ ರೋಹಿತ್ ಶರ್ಮಾ 2ನೇ ಅಭ್ಯಾಸ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿದ್ದರು. ಆದರೂ. ಪಾಕಿಸ್ತಾನ ವಿರುದ್ಧ ಮಹತ್ವ ಪಂದ್ಯದಲ್ಲಿ ರೋಹಿತ್ ತಾಳ್ಮೆಯ ಆಟವಾಡಿ ಇನ್ನಿಂಗ್ಸ್ ಕಟ್ಟಿ ಗಮನ ಸೆಳೆದಿದ್ದಾರೆ. 119 ಎಸೆತ ಎದುರಿಸಿದ ರೋಹಿತ್ ಪಾಕ್ ಬೌಲಿಂಗ್ ದಾಳಿಯನ್ನ ಹಿಮ್ಮೆಟಿಸಿ 91 ರನ್ ಸಿಡಿಸಿದರು.
2. ಯುವಿ ಹೈಕ್ಲಾಸ್ ಬ್ಯಾಟಿಂಗ್: ಅನಾರೋಗ್ಯದಿಂದ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದ ತಮ್ಮನ್ನ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಅಂತಿಮ 11ರಲ್ಲಿ ಉಳಿಸಿಕೊಂಡ ಕೊಹ್ಲಿ ನಿರ್ಧಾರ ಸಮರ್ಥಿಸುವಂತೆ ಬ್ಯಾಟ್ ಬೀಸಿದರು. ಕೊನೆಯ 10 ಓವರ್`ಗಳಲ್ಲಿ ಕ್ರೀಸ್`ಗೆ ಬಂದ ಯುವಿ 32 ಎಸೆತಗಳಲ್ಲಿ 53 ರನ್ ಸಿಡಿಸಿ ತಂಡದ ಸ್ಕೋರ್ ಹಿಗ್ಗಿಸಿದರು. ಹೀಗಾಗಿ, ಭಾರತದ ಸ್ಕೋರ್ 300ರ ಗಡಿ ದಾಟುವುದರೊಂದಿಗೆ ಪಾಕಿಸ್ತಾನದ ಮೇಲೆ ಒತ್ತೆ ಹೇರಲು ಸಹಾಯವಾಯ್ತು.
3. 2ನೇ ಓವರಿನಲ್ಲೇ ಸ್ಪಿನ್ ಮಾಡಿಸಿ ಕೈ ಸುಟ್ಟುಕೊಂಡ ಪಾಕ್ ಕ್ಯಾಪ್ಟನ್: ಪಂದ್ಯದ ಮೊದಲ ಓವರ್ ಬೌಲ್ ಮಾಡಿದ ವೇಗಿ ಮೊಹಮ್ಮದ್ ಅಮೀರ್ ಆರಂಭಿಕರಾದ ರೋಹಿತ್ ಮತ್ತು ಧವನ್ ಮೇಲೆ ಒತ್ತಡ ಹೇರಿದ್ದರು. ಆದರೆ, 2ನೇ ಓವರಿನಲ್ಲೇ ಕ್ಯಾಪ್ಟನ್ ಸರ್ಫಾಜ್ ಸ್ಪಿನ್ನರ್ ಇಮಾದ್ ವಾಸೀಂ ಕೈಗೆ ಬಾಲಿಟ್ಟರು. ಅಮೀರ್ ಹೇರಿದ ೊತ್ತಡ ಇಳಿದುಹೋಯ್ತು. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾರನ್ನ ಆರಂಭಿಕ ಓವರ್`ಗಳಲ್ಲಿ ಕಟ್ಟಿಹಾಕದಿದ್ದರೆ ಆಮೇಲೆ ಕಷ್ಟ ಎಂಬುದು ಕ್ರಿಕೆಟ್ ಜಗತ್ತಿಗೇ ಗೊತ್ತು. ಪಾಕಿಸ್ತಾನ ನಾಯಕನ ಅನನುಭವದ ಅವಕಾಶ ಪಡೆದ ಆರಂಭಿಕರು 139 ರನ್ ಜೊತೆಯಾಟ ನೀಡಿದರು.
4. ಶೋಯಿಬ್ ಮಲಿಕ್ ರನೌಟ್ ಮಾಡಿದ ಜಡೇಜಾ: 320 ರನ್`ಗಳ ಬೃಹತ್ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 91ರನ್`ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭ ಶಾಯಿಬ್ ಮಲಿಕ್ ಮತ್ತು ಮೊಹಮ್ಮದ್ ಹಫೀಜ್ ಕೆಲ ರನ್ ಕೂಡಿ ಹಾಕಿದ್ದರು. ಈ ಸಂದರ್ಭ ಮಿಂಚಿನ ಫೀಲ್ಡಿಂಗ್ ನಡೆಸಿದ ಮಲಿಕ್ ಅವರನ್ನ ರನೌಟ್ ಮಾಡಿ ಆಘಾತವನ್ನುಂಟುಮಾಡಿದರು.
5. ಗಾಯಾಳುವಾದ ಮೊಹಮ್ಮದ್ ಅಮೀರ್ ಮತ್ತು ಮೊಹಮ್ಮದ್ ರಿಯಾಜ್: ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮೊತ್ತೊಂದು ಆಘಾತವೆಂದರೆ ಇಬ್ಬರು ವೇಗಿಗಳು ಗಾಯಗೊಂಡಿದ್ದಾರೆ. ಮೊಹಮ್ಮದ್ ಅಮೀರ್ ಮತ್ತು ಮೊಹಮ್ಮದ್ ರಿಯಾಜ್ ಇಬ್ಬರೂ ಹಿಮ್ಮಡಿ ಗಾಯ ಮಾಡಿಕೊಂಡಿದ್ದಾರೆ. ಭಾರತದ ವಿರುದ್ಧ ಮೊಹಮ್ಮದ್ ಅಮೀರ್ ಮತ್ತು ಮೊಹಮ್ಮದ್ ರಿಯಾಜ್ ಕ್ರಮವಾಗಿ 8.1 ಓವರ್ ಮತ್ತು 8.4 ಓವರ್ ಬೌಲ್ ಮಾಡಿದ್ದರು.