Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾರತದ ಹೆಣ್ಣು ಮಕ್ಕಳು ದೇಶ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ: ಪ್ರಧಾನಿ

ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾರತದ ಹೆಣ್ಣು ಮಕ್ಕಳು ದೇಶ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ: ಪ್ರಧಾನಿ
ನವದೆಹಲಿ , ಶುಕ್ರವಾರ, 28 ಜುಲೈ 2017 (17:42 IST)
ನವದೆಹಲಿ: ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಮಿಥಾಲಿ ರಾಜ್ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ  ನೀಡಿ ಎಲ್ಲರ ಗಮನಸೆಳೆದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ಆಟಗಾರ್ತಿಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. 
 
ಫೈನಲ್ ಪಂದ್ಯದಲ್ಲಿ ಎದುರಾಳಿ ಇಂಗ್ಲೆಂಡ್ ವಿರುದ್ಧ 9 ರನ್ ಗಳ ಸೋಲು ಕಂಡು ರನ್ನರ್ ಆಪ್ ಆಗಿರುವ ಟೀಂ ಇಂಡಿಯಾ ತವರಿಗೆ ಆಗಮಿಸಿದ್ದು, ಭಾರತದ ವನಿತೆಯರ ತಂಡಕ್ಕೆ ಭರ್ಜರಿ ಸ್ವಾಗತ ದೊರೆಯಿತು. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ತಂಡ ಭೇಟಿ ಮಾಡಿ ಮಾತುಕತೆ ನಡೆಸಿದೆ. 
 
ಈ ವೇಳೆ ಮಾತನಾಡಿರುವ ಪ್ರಧಾನಿ ನೀವು ಸೋತಿಲ್ಲ. 125 ಕೋಟಿ ಭಾರತೀಯರ ಮೆಚ್ಚುಗೆಯನ್ನು ಗಳಿಸಿದ್ದೀರಾ. ಅದೇ ನಿಮ್ಮ ದೊಡ್ಡ ಗೆಲುವು. ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾರತದ ಹೆಣ್ಣು ಮಕ್ಕಳು ದೇಶ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಗತಿ ಹಾಗೂ ಅವರ ಸಾಧನೆಗಳು ಸಮಾಜಕ್ಕೆ ಲಾಭದಾಯಕವಾಗಿದೆ ಎಂದಿದ್ದಾರೆ. ಇದೇ ವೇಳೆ ಮಿಥಾಲಿ ರಾಜ್ ತಂಡ ಪ್ರಧಾನಿ ಮೋದಿಯವರಿಗೆ ತಮ್ಮ ಸಹಿ ಹಾಕಿರುವ ಬ್ಯಾಟ್ ವೊಂದನ್ನು ಉಡುಗೊರೆಯಾಗಿ ನೀಡಿದೆ.
 
ಮಹಿಳಾ ಆಟಗಾರ್ತಿಯರ ಭೇಟಿಯ ಫೋಟೋವನ್ನು ಪ್ರಧಾನಿ ಮೋದಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಪ್ರತ್ಯೇಕ ಸರಣಿ ಟ್ವೀಟ್ ಗಳ ಮೂಲಕ ಪ್ರತೀಯೊಬ್ಬ ಆಟಗಾರ್ತಿಯರನ್ನು ವೈಯಕ್ತಿವಾಗಿ ಶ್ಲಾಘಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಗಾಲೆ ಟೆಸ್ಟ್: ಫಾಲೋ ಆನ್ ಹೇರದ ಟೀಂ ಇಂಡಿಯಾ