Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಸಿಸಿ ಮಹಿಳಾ ವಿಶ್ವಕಪ್ ಮುಡಿಗೇರಿಸಿಕೊಂಡ ಇಂಗ್ಲೆಂಡ್

ಐಸಿಸಿ ಮಹಿಳಾ ವಿಶ್ವಕಪ್ ಮುಡಿಗೇರಿಸಿಕೊಂಡ ಇಂಗ್ಲೆಂಡ್
ಲಂಡನ್ , ಸೋಮವಾರ, 24 ಜುಲೈ 2017 (06:51 IST)
ಲಾರ್ಡ್ಸ್:ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 9 ರನ್ ಗಳ ಅಂತರದಲ್ಲಿ ಮಣಿಸಿದ ಇಂಗ್ಲೆಂಡ್ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದೆ. ರನ್ನರ್ಸ್ ಅಪ್ ಸ್ಥಾನಕ್ಕೆ ಭಾರತ ತೃಪ್ತಿ ಪಟ್ಟುಕೊಂಡಿದೆ.
 
ಇಂಗ್ಲೆಂಡ್ ನೀಡಿದ್ದ 228 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ಮಿಥಾಲಿ ರಾಜ್ ತಂಡ ಕೇವಲ 219 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಇಂಗ್ಲೆಂಡ್ ವಿರುದ್ಧ 9 ರನ್ ಗಳ ಅಂತರದಲ್ಲಿ ಸೋಲು ಅನುಭವಿಸಿತು. ಈ ಮೂಲಕ ಆತಿಥೇಯ ಇಂಗ್ಲೆಂಡ್ 4ನೇ ಬಾರಿಗೆ ವಿಶ್ವ ಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು.
 
ಫೈನಲ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 228 ರನ್ ಗಳ ಸವಾಲನ್ನು ಒಡ್ಡಿತು. ಇಂಗ್ಲಂಡ್‌ ತಂಡ ನೀಡಿದ 228 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫ‌ಲರಾದ ಭಾರತೀಯ ಮಹಿಳಾ ಆಟಗಾರ್ತಿಯರು ಅಂತಿಮವಾಗಿ 48.4 ಓವರುಗಳಲ್ಲಿ 219 ರನ್ ಗಳಿಗೆ ಆಲೌಟ್‌ ಆಗುವ ಮೂಲಕ ಹಾಲಿ ಚಾಂಪಿಯನ್ನರಿಗೆ 9 ರನ್ ಗಳಿಂದ ಶರಣಾದರು.
 
ಭಾರತಕ್ಕೆ ಪೂನಂ ರಾವತ್‌ (86ರನ್) ಉತ್ತಮ ಆರಂಭ ಒದಗಿಸಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಸೆಮಿ ಫೈನಲ್‌ ಪಂದ್ಯದ ಹೀರೋಯಿನ್‌ ಹರ್ಮನ್‌ ಪ್ರೀತ್‌ ಕೌರ್‌ (51ರನ್) ಮತ್ತು ವೇದ ಕೃಷ್ಣಮೂರ್ತಿ (35ರನ್) ಚೊಚ್ಚಲ ವಿಶ್ವಕಪ್‌ ಗೆಲ್ಲುವ ಕನಸಿಗೆ ಇನ್ನಷ್ಟು ಬಲ ತುಂಬಿದರು. ಆದರೆ 19 ರನ್ ಗಳ ಅಂತರದಲ್ಲಿ ಪ್ರಮುಖ 5 ವಿಕೆಟ್‌ಗಳು ಉರುಳಿದ್ದು ಮಿಥಾಲಿ ಪಡೆಗೆ ಮಾರಕವಾಯಿತು.
 

Share this Story:

Follow Webdunia kannada

ಮುಂದಿನ ಸುದ್ದಿ

ಸೀನಿಯರ್ಸ್ ತಂಡಕ್ಕೆ ನೋ ಎಂದ ರಾಹುಲ್ ದ್ರಾವಿಡ್