ನವದೆಹಲಿ: ಬಿಸಿಸಿಐ ಒಪ್ಪಂದ ಮರು ರಚನೆಗೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ಸಲ್ಲಿಸಿರುವ 19 ಪುಟಗಳ ಪ್ರಸ್ತಾಪ ಬಹಿರಂಗವಾಗಿದೆ. ಐಪಿಎಲ್ ಫೈನಲ್ ಪಂದ್ಯ ನಡೆದ ಮೇ 21ರಂದು ಬಿಸಿಸಿಐ ಹಾಗೂ ನಿರ್ವಾಹಕ ಸಮತಿ (ಸಿಒಎ)ಗೆ ಕುಂಬ್ಳೆ ವಿಸ್ತೃತ ವರದಿ ಸಲ್ಲಿಸಿದ್ದಾರೆ.
ಈ ವರದಿಯಲ್ಲಿ ಟೀಂ ಇಂಡಿಯಾ ನಾಯಕ ಪಡೆಯುತ್ತಿರುವ ವಾರ್ಷಿಕ ವೇತನದಲ್ಲಿ ಶೇ.60ರಷ್ಟನ್ನು ಮುಖ್ಯ ಕೋಚ್ ಗೆ ನೀಡಬೇಕೆಂಬ ಮನವಿ ಮುಂದಿಟ್ಟಿದ್ದರು. ಆಟಗಾರರು ಸಹಾಯಕ ಸಿಬ್ಬಂದಿಗಳ ವೇತನ ಹೆಚ್ಚಿಸುವಂತೆಯೂ ಕುಂಬ್ಳೆ ಬೇಡಿಕೆ ಮುಂದಿಟ್ಟಿದ್ದಾರೆ. ಮುಖ್ಯ ಕೋಚ್ ಗೆ 6.5 ಕೋಟಿ ಸಂಭಾವನೆ ನೀಡುತ್ತಿದ್ದು, ಇದನ್ನು 7.5 ಕೋಟಿಗೆ ಹೆಚ್ಚಿಸಬೇಕು. ಹಾಗೆಯೇ ಬ್ಯಾಟಿಂಗ್ ಕೋಚ್ ವೇತನವನ್ನು 2.25 ಕೋಟಿಗೆ ಹಾಗೂ ಫೀಲ್ಡಿಂಗ್ ಕೋಚ್ ವೇತನ 1.75 ಕೋಟಿಗೆ ಹೆಚ್ಚಿಸಲು ಪ್ರಸ್ತಾಪ ಮುಂದಿಟ್ಟಿದ್ದರು.
ಆಟಗಾರರ ಫಿಟ್ನೆಸ್ ಸ್ಟ್ಯಾಂಡರ್ಡ್ ಆಧರಿಸಿ ಶೇ.20ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.