Webdunia - Bharat's app for daily news and videos

Install App

ಕುಂಬ್ಳೆಗೆ ವಿಶ್ ಮಾಡಿ ಅಭಿಮಾನಿಗಳಿಂದ ಉಗಿಸಿಕೊಂಡ ಬಿಸಿಸಿಐ..!?

Webdunia
ಮಂಗಳವಾರ, 17 ಅಕ್ಟೋಬರ್ 2017 (19:37 IST)
ನವದೆಹಲಿ: ಇಂದು ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ 47ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಸೇರಿದಂತೆ ಎಲ್ಲಾ ಗಣ್ಯರು ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

ಆದ್ರೆ ಕುಂಬ್ಳೆಗೆ ವಿಶ್ ಮಾಡೋಕೆ ಹೋಗಿ ಬಿಸಿಸಿಐ ಎಡವಟ್ಟು ಮಾಡಿಕೊಂಡಿದ್ದು,  ಟ್ಟಿಟ್ಟಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟ್ವಿಟರ್‌ ಮೂಲಕ ಶುಭಾಶಯ ಕೋರಿರುವು ಬಿಸಿಸಿಐ, 'ಟೀಂ ಇಂಡಿಯಾ ಮಾಜಿ ಬೌಲರ್‌ ಅನಿಲ್‌ ಕುಂಬ್ಳೆ ಅವರಿಗೆ ಹುಟ್ಟುಹಬ್ಬದ ಶುಭಾಶಯ' ಎಂದು ಟ್ವೀಟ್ ಮಾಡಿದೆ. ಇದನ್ನು ಕಂಡ ಕ್ರಿಕೆಟ್‌ ಅಭಿಮಾನಿಗಳು ಟ್ವಿಟರ್‌ನಲ್ಲಿಯೇ ಬಿಸಿಸಿಐಗೆ ತರಾಟೆ ತೆಗೆದುಕೊಂಡಿದ್ದಾರೆ.

'ಕೇವಲ ಬೌಲರ್‌ ಅಲ್ಲ ಅವರೊಬ್ಬ ನಾಯಕ, ಕೋಚ್‌ ಮತ್ತು ಅತಿ ಹೆಚ್ಚು ವಿಕೆಟ್‌ ಪಡೆದವರು' ಎಂದು ಜರ್ನಲಿಸ್ಟ್‌ ಮತ್ತು ಲೇಖಕ ದಿಗ್ವಿಜಯ್‌ ಸಿಂಗ್‌ ಡಿಯೋ ಟ್ವಿಟರ್‌ನಲ್ಲಿ ಬಿಸಿಸಿಐಗೆ ಬಿಸಿ ಮುಟ್ಟಿಸಿದ್ದಾರೆ. 'ಗೌರವ ಕೊಟ್ಟು, ಗೌರವ ತಗೊಳ್ಳಿ' ಎಂದು ಅಭಿಮಾನಿಯೋರ್ವ ಬಿಸಿಸಿಐಗೆ ಸೂಚಿಸಿದ್ದಾರೆ.

ಸದ್ಯ ಹೊಸದಾಗಿ ಟ್ವೀಟ್‌ ಮಾಡಿರುವ ಬಿಸಿಸಿಐ, 'ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು’ ಎಂದು ಹಾಕಿದ್ದಾರೆ. ಜತೆಗೆ ಲೆಜೆಂಡ್‌ ಎಂಬ ಹ್ಯಾಶ್‌ಟ್ಯಾಗ್‌ ಕೂಡ ಹಾಕಿದೆ.

ಟೀಂ ಇಂಡಿಯಾ ನಾಯಕ ಕೊಹ್ಲಿ ಜೊತೆಗಿನ ವೈಮನಸ್ಸಿನಿಂದ ಕುಂಬ್ಳೆ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಭಾರತದ ಪರ 17 ವರ್ಷ ಕ್ರಿಕೆಟ್‌ ಆಡಿರುವ ಕುಂಬ್ಳೆ, ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ (619) ಪಡೆದ ಭಾರತೀಯ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments